ನವದೆಹಲಿ: ಕೊರೋನಾವೈರಸ್ ಜಾಗತಿಕವಾಗಿ ಕಾಣಿಸಿಕೊಂಡ ಬಳಿಕ ನಮ್ಮ ಜೀವನ ಅನೇಕ ರೀತಿಯಲ್ಲಿ ಬದಲಾಗಿದೆ. ನಮಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಮುಖಗವಸುಗಳನ್ನು ಧರಿಸುವುದು ಅನಿವಾರ್ಯವಾಗಿದೆ. ವೈರಸ್ ಹರಡುವುದನ್ನು ನಿಯಂತ್ರಿಸಲು ಕೈಗಳನ್ನು ತೊಳೆಯುವುದು ಅಥವಾ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಕೂಡ ಅತ್ಯವಶ್ಯಕವಾಗಿದೆ.
ಈ ಸನ್ನಿವೇಶದ ಹಿನ್ನೆಲೆಯಲ್ಲಿ ತಮಿಳುನಾಡಿನ ಜವಳಿ ಶೋ ರೂಂ ತಮ್ಮ ಗ್ರಾಹಕರಿಗೆ ಸ್ಯಾನಿಟೈಸರ್ ನೀಡಲು ವಿಭಿನ್ನ ಮಾರ್ಗವನ್ನು ಅನುಸರಿಸಿದೆ. ಇಲ್ಲಿಗೆ ಅಗಮಿಸುವ ಗ್ರಾಹಕರಿಗೆ ಸ್ಯಾನಿಟೈಸರ್ ಒದಗಿಸಲು ಸೀರೆ ಧರಿಸಿದ ಮ್ಯಾನಿಕ್ವಿನ್ ಅನ್ನು ಅಂಗಡಿಯಲ್ಲಿ ಇರಿಸಲಾಗಿದೆ. ಇದು ಅತ್ತಿತ್ತ ಓಡಾಡಿ ಗ್ರಾಹಕರಿಗೆ ಸ್ಯಾನಿಟೈಝರ್ ನೀಡುತ್ತದೆ. ಇದರ ವಿಡಿಯೋ ವೈರಲ್ ಆಗಿದೆ.
ಜನರು ತಮ್ಮ ಕೈಗಳನ್ನು ಸ್ವಚ್ಛಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಅಂಗಡಿಯು ಸ್ವಯಂಚಾಲಿತ ಮನುಷ್ಯಾಕೃತಿಯ ಮ್ಯಾನಿಕ್ವಿನ್ ಅನ್ನು ಬಳಸಿಕೊಂಡಿದೆ. ಗ್ರಾಹಕರಿಗೆ ಸ್ಯಾನಿಟೈಝರ್ ನೀಡುವ ಸಂಪೂರ್ಣ ಪ್ರಕ್ರಿಯೆಯು ಸಂಪರ್ಕವಿಲ್ಲದಂತೆ ಮಾಡಲಾಗಿದೆ. ಅತ್ಯಂತ ಆಸಕ್ತಿದಾಯಕ ಸಾಂಪ್ರದಾಯಿಕ ಸೀರೆಯನ್ನು ಧರಿಸಿರುವ ಗೊಂಬೆ ಹೆಚ್ಚು ಆಕರ್ಷಕವಾಗಿ ಇಲ್ಲಿ ಕಾಣುತ್ತದೆ. ಈ ಗೊಂಬೆ ಸೀರೆಗಳಿಗೆ ಮಾಡೆಲ್ ಕೂಡ ಆಗಿದೆ.
ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಧಾ ರಾಮೆನ್ ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. “ಟಿಎನ್ನಲ್ಲಿನ ಜವಳಿ ಶೋ ರೂಂಗಳಲ್ಲಿ ತಂತ್ರಜ್ಞಾನವು ಸರಿಯಾದ ರೀತಿಯಲ್ಲಿ ಬಳಕೆಗೆ ಬಂದಿದೆ. ಸೀರೆಯಲ್ಲಿನ ಸ್ವಯಂಚಾಲಿತ ಮನುಷ್ಯಾಕೃತಿ ಗ್ರಾಹಕರನ್ನು ಪತ್ತೆಹಚ್ಚುತ್ತದೆ ಮತ್ತು ಸ್ಯಾನಿಟೈಸರ್ಗಳನ್ನು ಒದಗಿಸಲು ಅವರ ಬಳಿಗೆ ಹೋಗುತ್ತದೆ. ಕೊರೋನೋತ್ತರದಲ್ಲಿ ನಾವು ತಾಂತ್ರಿಕ ವಿಕಸನಗಳನ್ನು ಹೆಚ್ಚು ಹೆಚ್ಚು ಕಾಣುವುದು ಖಚಿತ” ಎಂದು ಅವರು ಬರೆದಿದ್ದಾರೆ.
ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಕೂಡ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. “ಟು-ಇನ್-ಒನ್: ಅವಳು ಸೀರೆಗಳಿಗೆ ಮಾಡೆಲ್ ಆಗಿದ್ದಾಳೆ ಮತ್ತು ನಮಗೆ ಸ್ಯಾನಿಟೈಸರ್ ಅನ್ನು ಸಹ ಒದಗಿಸುತ್ತಾಳೆ” ಎಂದು ಬರೆದಿದ್ದಾರೆ.
Technology put to right use at one of the textile showrooms in TN. An automated mannequins draped in saree detects customers around and walks to them to provide sanitisers. Post Corona is sure to see intensified technological evolutions. pic.twitter.com/r2QQg1wpsY
— Sudha Ramen IFS 🇮🇳 (@SudhaRamenIFS) July 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.