ಚೆನ್ನೈ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಉಪಕ್ರಮ ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಮಾರ್ಟ್ಫೋನ್ ದೈತ್ಯ ಆ್ಯಪಲ್ ತನ್ನ ಪ್ರಮುಖ ಐಫೋನ್ 11 ಅನ್ನು ಚೆನ್ನೈ ಬಳಿಯ ಫಾಕ್ಸ್ಕಾನ್ ಘಟಕದಲ್ಲಿ ಉತ್ಪಾದಿಸಲು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ.
ಸ್ಥಳೀಯವಾಗಿ ಐಫೋನ್ ಎಸ್ಇ ಉತ್ಪಾದಿಸುವ ಮೂಲಕ ಆ್ಯಪಲ್ 2017ರಲ್ಲಿ ಭಾರತದಲ್ಲಿ ದೇಶೀಯ ಉತ್ಪಾದನೆಯನ್ನು ಪ್ರಾರಂಭಿಸಿತು. ಈ ಹಿಂದೆ ಬೆಂಗಳೂರು ಬಳಿಯ ವಿನ್ಸ್ಟನ್ ಘಟಕವನ್ನು ಸಂಸ್ಥೆ ಹಳೆಯ ಐಫೋನ್ ಎಸ್ಇ ಉತ್ಪಾದಿಸಲು ಬಳಸುತ್ತಿತ್ತು, ಹೊಸ ಮಾದರಿ ಬಿಡುಗಡೆಯ ನಂತರ ಅದನ್ನು ಹಿಂಪಡೆಯಲಾಗಿದೆ.
ಮೂಲಗಳ ಪ್ರಕಾರ, ಆ್ಯಪಲ್ ಉತ್ಪಾದನೆಯನ್ನು ಹಂತಗಳಲ್ಲಿ ಹೆಚ್ಚಿಸಲಾಗುತ್ತದೆ. ಇಲ್ಲಿ ಉತ್ಪಾದಿಸಿದ ಐಫೋನ್ 11 ಅನ್ನು ರಫ್ತು ಮಾಡಬಹುದಾಗಿದೆ, ಇದು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಐಫೋನ್ 11 ಜೊತೆಗೆ, ಆ್ಯಪಲ್ ಸ್ಥಳೀಯವಾಗಿ ಎರಡು ಇತರ ಡಿವೈಸ್ಗಳನ್ನು ಸಹ ಉತ್ಪಾದಿಸಲಿದೆ. ಅದೆಂದರೆ ಫಾಕ್ಸ್ಕಾನ್ ಘಟಕದಲ್ಲಿ ಐಫೋನ್ ಎಕ್ಸ್ಆರ್ ಮತ್ತು ವಿಸ್ಟ್ರಾನ್ ಸೌಲಭ್ಯದಲ್ಲಿ ಐಫೋನ್ 7.
ಐಫೋನ್ 11 ಅನ್ನು ಸ್ಥಳೀಯವಾಗಿ ಉತ್ಪಾದಿಸುವ ಕ್ರಮವು ಭಾರತದ ಸರ್ಕಾರದ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಉಪಕ್ರಮಕ್ಕೆ ಪೂರಕವಾಗಿದೆ, ಇದು ದೇಶದ ಸ್ಮಾರ್ಟ್ಫೋನ್ಗಳ ದೇಶೀಯ ಉತ್ಪಾದನೆಗೆ ಮತ್ತು ಜೋಡಣೆ ಹೊಸ ಪ್ರಚೋದನೆಯನ್ನು ನೀಡಿದೆ. ಇದು ಈ ಮಾಡೆಲ್ ಅನ್ನು ಭಾರತದಿಂದ ವಿಶ್ವದಾದ್ಯಂತ ರಫ್ತು ಮಾಡಲು ಅನುವು ಮಾಡಿಕೊಡಲಿದೆ. ಮಾತ್ರವಲ್ಲದೇ, ಇದು ಚೀನಾ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಐಫೋನ್ 11 ಭಾರತದಲ್ಲಿ ಕಂಪನಿಯ ಅತಿದೊಡ್ಡ ಮಾರಾಟ ಕಾಣುವ ಸಾಧನವಾಗಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಭಾರತ ನಿರ್ಮಿತ ಐಫೋನ್ 11ಈಗಾಗಲೇ ಸ್ಟೋರ್ಗಳನ್ನು ತಲುಪಿದ್ದು ಗ್ರಾಹಕರ ಕೈಗೆ ಸೇರಲು ಆರಂಭಿಸಿದೆ.
ಸ್ಥಳೀಯ ಉತ್ಪಾದನೆಯು ಆ್ಯಪಲ್ನ 22% ಆಮದು ಸುಂಕವನ್ನು ಉಳಿಸುತ್ತದೆ. ಇದರಿಂದ ಸ್ಮಾರ್ಟ್ಫೋನ್ ದರವೂ ಇಳಿಕೆಯಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.