ನವದೆಹಲಿ: ಭಾರತೀಯ ಔಷಧ ಕಂಪನಿ ಸಿಪ್ಲಾ, ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಅಭಿವೃದ್ಧಿ ಮಾಡಿರುವ ಫವಿಪಿರವಿರ್ ಔಫದವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ. ಕೋವಿಡ್-19 ಚಿಕಿತ್ಸೆಯಲ್ಲಿ ಈ ಔಷಧವನ್ನು ಬಳಕೆ ಮಾಡಲಾಗುತ್ತಿದ್ದು, ಇದರಿಂದಾಗಿ ಚಿಕಿತ್ಸಾ ವೆಚ್ಚವೂ ಕಡಿಮೆಯಾಗಲಿದೆ ಎಂದೂ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ಪೇಟೆಂಟ್ ನಿರ್ಬಂಧವಿಲ್ಲದ ಈ ಆ್ಯಂಟಿ ವೈರಲ್ ಔಷಧವನ್ನು ಕೊರೋನಾ ಆರಂಭಿಕ ಹಂತದಲ್ಲಿರುವ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಬಹುದಾಗಿದ್ದು, ಇದು ಪರಿಣಾಮಕಾರಿ ಫಲಿತಾಂಶ ನೀಡಲಿದೆ ಎಂದೇ ಹೇಳಲಾಗುತ್ತಿದೆ. ಆರಂಭದಲ್ಲಿ ಈ ಔಷಧವನ್ನು ಜಪಾನಿನ ಫಾರ್ಮಾ ಕಂಪೆನಿಯೊಂದು ಅಭಿವೃದ್ಧಿ ಮಾಡಿತ್ತು. ಇದೀಗ ಭಾರತದಲ್ಲಿಯೂ ಸಂಶೋಧಕರು ಸ್ಥಳೀಯವಾಗಿ ಸಿಗುವ ಔಷಧೀಯ ಕಚ್ಛಾ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ಈ ಔಷಧವನ್ನು ಅಭಿವೃದ್ಧಿ ಮಾಡಿದ್ದಾರೆ.
ಇದೀಗ ಇದನ್ನು ತಯಾರಿಸಲು ತಂತ್ರಜ್ಞಾನವನ್ನು ಸಿಪ್ಲಾ ಕಂಪೆನಿಗೆ ನೀಡಲಾಗಿದೆ. ಸಿಪ್ಲಾ ಸಂಸ್ಥೆಯು ಈ ಔಷಧವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಅನುಮತಿ ಕೋರಿ ಔಷಧ ನಿಯಂತ್ರಣ ಮಹಾ ನಿರ್ದೇಶಕರಿಗೂ ಮನವಿಯನ್ನು ಸಲ್ಲಿಸಿದೆ. ಇದಕ್ಕೆ ಪೂರಕ ಎಂಬಂತೆ ತುರ್ತು ಪರಿಸ್ಥಿತಿಯಲ್ಲಿ ಈ ಔಷಧವನ್ನು ಬಳಸಬಹುದಾಗಿದೆ ಎಂದು ಮಹಾನಿರ್ದೇಶಕರು ಅನುಮತಿಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಪ್ಲಾ ಇದೀಗ ಭಾರತದಲ್ಲಿ ಈ ಔಷಧವನ್ನು ಬಿಡುಗಡೆ ಮಾಡಲು ಪೂರಕ ಕ್ರಮಗಳನ್ನು ಕೈಗೊಂಡಿರುವುದಾಗಿಯೂ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.