ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಕೋವಿಡ್-19ನಿಂದ ಚೇತರಿಸಿಕೊಂಡವರ ಸಂಖ್ಯೆ 34,602 ಆಗಿದೆ. ದೇಶದಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರ ಒಂದೇ ದಿನದಲ್ಲಿ ಚೇತರಿಸಿಕೊಂಡವರ ಅತೀ ಹೆಚ್ಚು ಸಂಖ್ಯೆ ಇದಾಗಿದೆ ಎಂದು ವರದಿಗಳು ತಿಳಿಸಿವೆ.
ಇದರೊಂದಿಗೆ, ಕೋವಿಡ್ -19ನಿಂದ ಚೇತರಿಸಿಕೊಂಡ ಪ್ರಕರಣಗಳು ದೇಶದಲ್ಲಿ 8,17,209 ಕ್ಕೆ ಏರಿದೆ ಮತ್ತು ಚೇತರಿಕೆ ಪ್ರಮಾಣವು ದೇಶದಲ್ಲಿ ಶೇಕಡಾ 63.45 ಕ್ಕೆ ಸುಧಾರಿಸಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಅತಿ ಹೆಚ್ಚು 49 ಸಾವಿರ 310 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಸರ್ಕಾರ ತಿಳಿಸಿದೆ. ಒಟ್ಟು ಪ್ರಕರಣಗಳ ಸಂಖ್ಯೆ 12,87,945 ಕ್ಕೆ ತಲುಪಿದೆ.
ಪ್ರಸ್ತುತ, ದೇಶದಲ್ಲಿ ಸಕ್ರಿಯ ಕರೋನಾ ಪ್ರಕರಣಗಳ ಸಂಖ್ಯೆ 4,40,135 ಆಗಿದೆ. ಒಂದೇ ದಿನದಲ್ಲಿ, 740 ಸಾವುಗಳು ರಾಷ್ಟ್ರವ್ಯಾಪಿ ಸಂಭವಿಸಿದೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 30,601 ಕ್ಕೆ ತಲುಪಿದೆ ಎಂದು ವರದಿಯಾಗಿದೆ.
ಆದರೂ, ದೇಶದಲ್ಲಿ ಸಾವಿನ ಪ್ರಮಾಣ ನಿರಂತರವಾಗಿ ಕುಸಿಯುತ್ತಿದೆ ಮತ್ತು ಅದು ಶೇಕಡಾ 2.37 ಕ್ಕೆ ತಲುಪಿದೆ.
ಈ ನಡುವೆ, ವಿವಿಧ ಪ್ರಯೋಗಾಲಯಗಳು ಕಳೆದ 24 ಗಂಟೆಗಳ ಒಳಗೆ ಒಟ್ಟು 3,52,801 ಕರೋನಾವೈರಸ್ ಮಾದರಿಗಳನ್ನು ಪರೀಕ್ಷೆ ನಡೆಸಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ತಿಳಿಸಿದೆ.
ಈವರೆಗೆ ದೇಶದಲ್ಲಿ 1,54,28,170 ಪರೀಕ್ಷೆಗಳನ್ನು ನಡೆಸಲಾಗಿದೆ. ಐಸಿಎಂಆರ್ ದೇಶದಲ್ಲಿ ನಿರಂತರವಾಗಿ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸುತ್ತಾ ಬಂದಿದೆ.
ಪ್ರಸ್ತುತ, ದೇಶಾದ್ಯಂತ ಒಟ್ಟು 1,290 ಪ್ರಯೋಗಾಲಯಗಳು ಕೋವಿಡ್ -19 ಅನ್ನು ಪರೀಕ್ಷೆ ನಡೆಸುತ್ತಿದ್ದು, ಇದರಲ್ಲಿ 897 ಸರ್ಕಾರಿ ಪ್ರಯೋಗಾಲಯಗಳು ಮತ್ತು 393 ಖಾಸಗಿ ಪ್ರಯೋಗಾಲಯ ಸೇರಿವೆ.
ಕರೋನವೈರಸ್ ಪ್ರಕರಣಗಳ ಚೇತರಿಕೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ, ದೆಹಲಿಯು ಶೇ .85.63ರೊಂದಿಗೆ ಅಗ್ರಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.