ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸಲು ಅಭೂತಪೂರ್ವ ಸಹಯೋಗವನ್ನು ಭಾರತ ಮತ್ತು ಇಸ್ರೇಲ್ ಹೊಂದಿದೆ. ಇದರ ಭಾಗವಾಗಿ ಇಸ್ರೇಲ್ ಈ ವಾರ ಭಾರತಕ್ಕೆ ಉನ್ನತ ಮಟ್ಟದ ಸಂಶೋಧನಾ ನಿಯೋಗವನ್ನು ಕಳುಹಿಸುತ್ತಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ)ದ ಜೊತೆಗೂಡಿ ಕೊರೊನಾವೈರಸ್ ಅನ್ನು ಶೀಘ್ರವಾಗಿ ಪತ್ತೆಹಚ್ಚಲು ಅಂತಿಮ ಹಂತಗಳ ಸುಧಾರಿತ ತಂತ್ರಜ್ಞಾನಗಳ ಪರೀಕ್ಷೆಯ ನಡೆಸಲು ಈ ನಿಯೋಗ ಭಾರತಕ್ಕೆ ಬರುತ್ತಿದೆ ಎಂದು ವರದಿಗಳು ತಿಳಿಸಿವೆ.
ಇಸ್ರೇಲಿ ಆರ್ & ಡಿ ಸಂಶೋಧಕರು ಭಾರತದ ವಿಜ್ಞಾನಿ ಕೆ ವಿಜಯ್ ರಾಘವನ್ ಮತ್ತು ಡಿಆರ್ಡಿಓದ ಜೊತೆಗೂಡಿ ಕರೋನವೈರಸ್ ಅನ್ನು ಪತ್ತೆ ಹಚ್ಚಲು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ತ್ವರಿತ ಪರೀಕ್ಷೆಯನ್ನು ನಡೆಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಲಿದ್ದಾರೆ, ಇದು ಜಾಗತಿಕ ಸಾಂಕ್ರಾಮಿಕದ ವಿರುದ್ಧದ ಹೋರಾಟವನ್ನು ಸುಗಮಗೊಳಿಸುತ್ತದೆ. ಇಸ್ರೇಲ್ ರಕ್ಷಣಾ ಸಚಿವಾಲಯದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ನಿರ್ದೇಶನಾಲಯದ ನೇತೃತ್ವದ ಇಸ್ರೇಲಿ ನಿಯೋಗವು ಹಲವಾರು ಕ್ಷಿಪ್ರ ರೋಗನಿರ್ಣಯ ಪರಿಹಾರಗಳ ಪರಿಣಾಮಕಾರಿತ್ವವನ್ನು ನಿರ್ಧರಿಸಲು ಹಲವಾರು ಪರೀಕ್ಷೆಗಳನ್ನು ನಡೆಸಲಿದೆ.
ಅವರು ಕೇವಲ ಹತ್ತು ದಿನಗಳಲ್ಲಿ ಹತ್ತಾರು ಮಾದರಿಗಳನ್ನು ಸಂಗ್ರಹಿಸುತ್ತಾರೆ ಮತ್ತು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಕಂಪ್ಯೂಟರ್ ವ್ಯವಸ್ಥೆಗಳನ್ನು ಬಳಸಿ ವಿಶ್ಲೇಷಿಸುತ್ತಾರೆ. ಈ ಬೃಹತ್ ಮಾದರಿಯು ಪರೀಕ್ಷಾ ಪ್ರಕ್ರಿಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಪರಿಣಾಮಕಾರಿ ತಂತ್ರಜ್ಞಾನದ ಅನುಮೋದನೆಯನ್ನು ನೀಡುತ್ತದೆ. ಪಿಸಿಆರ್ ಪರೀಕ್ಷೆಗಳನ್ನು ಬಳಸಿಕೊಂಡು ಎಲ್ಲಾ ಪರೀಕ್ಷೆಗಳನ್ನು ಮೌಲ್ಯೀಕರಿಸಲಾಗುತ್ತದೆ. ಈ ಉದ್ದೇಶಕ್ಕಾಗಿ, ಇಸ್ರೇಲ್ ಮತ್ತು ಭಾರತ ಎರಡೂ ನಿರ್ವಹಿಸಬಲ್ಲಂತಹ ಪರೀಕ್ಷಾ ತಾಣಗಳನ್ನು ಸ್ಥಾಪಿಸಲು ಕೇಂದ್ರವು ಸುಮಾರು 100 ವೃತ್ತಿಪರರ ಸ್ಥಳೀಯ ತಂಡವನ್ನು ನೇಮಿಸಿದೆ ಎಂದು ವರದಿಗಳು ತಿಳಿಸಿವೆ.
ಧ್ವನಿ ಪರೀಕ್ಷೆ, ಟೆರ್ರಾ-ಹರ್ಟ್ಜ್ ತರಂಗಗಳ ಆಧಾರದ ಮೇಲೆ ಬ್ರೀಥಲೈಜರ್ ಪರೀಕ್ಷೆ, ಐಸೊಥರ್ಮಲ್ ಟೆಸ್ಟ್ ಮತ್ತು ಪಾಲಿಮೈನ್ ಆಮ್ಲಗಳ ಪರೀಕ್ಷೆಯನ್ನು ಪರೀಕ್ಷಿಸುವ ಫೋರ್ ಟೆಕ್ ಸಿಸ್ಟಮ್ಗಳು ದೇಹದಲ್ಲಿ SARS-CoV-2 (ಕೋವಿಡ್-19 ಗೆ ಕಾರಣವಾಗುವ ವೈರಸ್) ಇರುವಿಕೆಯನ್ನು ಸಾಮಾನ್ಯವಾಗಿ ನಿಮಿಷಗಳಲ್ಲಿ ಕಂಡುಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗಿದೆ.
ಇಸ್ರೇಲಿ ನಿಯೋಗವು 20 ವ್ಯಕ್ತಿಗಳನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.
#PressRelease: In the coming weeks, Israel’s Ministry of Foreign Affairs @IsraelMFA, Ministry of Defence @Israel_MOD and Ministry of Health will lead an unprecedented anti-#Covid_19 cooperation operation between #India and #Israel.
1/ pic.twitter.com/EVc3hcTZqf— Israel in India (@IsraelinIndia) July 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.