ನವದೆಹಲಿ: ಸ್ಯಾಮ್ಸಂಗ್ ಗುರುವಾರ ಹೊಸ ಉದ್ಯಮ-ಅಕಾಡೆಮಿ ಕಾರ್ಯಕ್ರಮ (industry-academia programme) ಅನ್ನು ಪ್ರಕಟಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಬೆಂಗಳೂರಿನಲ್ಲಿರುವ ಆರ್ & ಡಿ ಇನ್ಸ್ಟಿಟ್ಯೂಟ್, ಭಾರತದ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ (ಎಂಎಲ್), ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು 5ಜಿಯಂತಹ ಹೊಸ ತಂತ್ರಜ್ಞಾನಗಳ ವಿಷಯದಲ್ಲಿ ಸಹಭಾಗಿತ್ವವನ್ನು ಮಾಡಿಕೊಳ್ಳಲಿದೆ.
‘ಸ್ಯಾಮ್ಸಂಗ್ PRISM’ (Preparing and Inspiring Student Minds) ಎಂದು ಕರೆಯಲ್ಪಡುವ ಈ ಕಾರ್ಯಕ್ರಮದ ಅಡಿಯಲ್ಲಿರುವ ಯೋಜನೆಗಳನ್ನು ವಿದ್ಯಾರ್ಥಿಗಳ ತಂಡ ಮತ್ತು ಪ್ರಾಧ್ಯಾಪಕರು ಕೈಗೆತ್ತಿಕೊಳ್ಳುತ್ತಾರೆ. ಸ್ಯಾಮ್ಸಂಗ್ ಆರ್ & ಡಿ ಇನ್ಸ್ಟಿಟ್ಯೂಟ್ ಬೆಂಗಳೂರು (ಎಸ್ಆರ್ಐ-ಬಿ)ನಲ್ಲಿನ ಮಾರ್ಗದರ್ಶಕರು ತರಬೇತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
“ಈ ಕಾರ್ಯಕ್ರಮವು ನಮ್ಮ ಅಕಾಡೆಮಿ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಲವನ್ನು ಒಳಗೊಂಡಿದೆ, ಇದು ನಿಸ್ಸಂದೇಹವಾಗಿ ವಿಶ್ವದ ಅತ್ಯುತ್ತಮವಾಗಿದೆ” ಎಂದು ಎಸ್ಆರ್ಐ-ಬಿ ವ್ಯವಸ್ಥಾಪಕ ನಿರ್ದೇಶಕ ದೀಪೇಶ್ ಷಾ ಹೇಳಿದರು.
ಎಸ್ಆರ್ಐ-ಬಿ ಕೊರಿಯಾದ ಹೊರಗಿನ ಸ್ಯಾಮ್ಸಂಗ್ನ ಅತಿದೊಡ್ಡ ಆರ್ & ಡಿ ಸೌಲಭ್ಯವಾಗಿದೆ. ಇದು ಇಲ್ಲಿಯವರೆಗೆ 10 ಎಂಜಿನಿಯರಿಂಗ್ ಕಾಲೇಜುಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಹೆಚ್ಚಿನ ಕಾಲೇಜುಗಳನ್ನು ಒಪ್ಪಂದಕ್ಕೆ ಸೇರಿಸಲಿದೆ.
ಸ್ಯಾಮ್ಸಂಗ್ ಇನ್ಸ್ಟಿಟ್ಯೂಟ್ ಈ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಸಹಕರಿಸಲಿದೆ, ಅವರೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ನಾಲ್ಕರಿಂದ ಆರು ತಿಂಗಳುಗಳೊಳಗೆ ಕಾರ್ಯಗತಗೊಳಿಸಲಿದೆ ಎಂದು ಹೇಳಲಾಗಿದೆ.
ಪ್ರತಿ ಎಂಜಿನಿಯರಿಂಗ್ ಕಾಲೇಜು ಅನೇಕ ತಂಡಗಳನ್ನು ಹೊಂದಬಹುದು, ಮತ್ತು ಎಸ್ಆರ್ಐ-ಬಿ ನಡೆಸಿದ ಪರೀಕ್ಷೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಎಸ್ಆರ್ಐ-ಬಿ ಜೊತೆ ಜಂಟಿಯಾಗಿ ಪೇಪರ್ಗಳನ್ನು ಪ್ರಕಟಿಸಲು ಮತ್ತು ಪೇಟೆಂಟ್ಗಳನ್ನು ಸಲ್ಲಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಸ್ಯಾಮ್ಸಂಗ್ ತಿಳಿಸಿದೆ.
ಎಸ್ಆರ್ಐ-ಬಿ ಕಳೆದ ವರ್ಷ ಪ್ರಾಯೋಗಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು, ಇದರಲ್ಲಿ 150 ತಂಡಗಳು ಅನನ್ಯ ಆರ್ & ಡಿ ಯೋಜನೆಗಳಲ್ಲಿ ಕೆಲಸ ಮಾಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.