ನವದೆಹಲಿ: ಕೋವಿಡ್-19ಗೆ ಲಸಿಕೆ ತಯಾರಿಸುವ ಪ್ರಯತ್ನದಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾ ಜೆನೆಕಾ ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಲಸಿಕೆಯನ್ನು ಭಾರತದಲ್ಲಿ ‘ಕೋವಿಶೀಲ್ಡ್’ ಎಂದು ಹೆಸರಿಸುವುದಾಗಿ ಘೋಷಿಸಿದೆ ಎಂದು ವರದಿಗಳು ತಿಳಿಸಿವೆ.
ಲ್ಯಾನ್ಸೆಟ್ ಜರ್ನಲ್ನಲ್ಲಿನ ಅಧ್ಯಯನವು ಸಂಭಾವ್ಯ ಲಸಿಕೆಯ ಮೊದಲ ಎರಡು ಪ್ರಯೋಗ ಹಂತಗಳು ಭರವಸೆಯ ಫಲಿತಾಂಶಗಳನ್ನು ತೋರಿಸಿದೆ ಎಂದು ಹೇಳಿದ ನಂತರ ಸಂಸ್ಥೆಯು ಈ ಹೇಳಿಕೆಯನ್ನು ನೀಡಿದೆ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನವಾಲಾ ಅವರು ಡಿಸೆಂಬರ್ 2020 ರ ಅಂತ್ಯದವರೆಗೆ 3 ರಿಂದ 4 ಮಿಲಿಯನ್ ಡೋಸ್ಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರಸ್ತುತ ಲಸಿಕೆಯ 3ನೇ ಹಂತದ ಪ್ರಯೋಗಗಳಿಗೆ ಭಾರತ ಸರ್ಕಾರದಿಂದ ಅನುಮತಿ ಪಡೆಯುತ್ತಿದೆ ಎಂದು ಪೂನವಾಲಾ ಮಾಹಿತಿ ನೀಡಿದ್ದಾರೆ. ‘ಕೋವಿಶೀಲ್ಡ್’ ಬೆಲೆಯನ್ನು 1,000 ರೂ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ನಿಗದಿ ಮಾಡಲಾಗುವುದು ಎಂದಿದ್ದಾರೆ.
ಆದರೂ, ಸರ್ಕಾರವು ಲಸಿಕೆಯನ್ನು ಖರೀದಿಸಿದ ನಂತರ ಮತ್ತು ಹಲವಾರು ರೋಗನಿರೋಧಕ ಕಾರ್ಯಕ್ರಮಗಳ ಮೂಲಕ ಅದನ್ನು ವಿತರಿಸಿದ ನಂತರ ಉಚಿತವಾಗಿ ಲಭ್ಯವಾಗಹುದು, ಲಸಿಕೆ ಉತ್ಪಾದನೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು. ಒಂದು ಭಾರತಕ್ಕೆ ಮತ್ತು ಇನ್ನೊಂದು ವಿಶ್ವದ ಉಳಿದ ಭಾಗಗಳಿಗೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.