ನವದೆಹಲಿ: ಮೇಕ್ ಇನ್ ಇಂಡಿಯಾ ಮತ್ತು ಭಾರತ ಸರ್ಕಾರದ ಆತ್ಮನಿರ್ಭರ ಭಾರತ ಕನಸಿಕೆ ಮಹತ್ವದ ಉತ್ತೇಜನ ಸಿಕ್ಕಿದೆ. ಜಪಾನಿನ ಕಾರು ತಯಾರಕ ಹೋಂಡಾ ಕಾರ್ಸ್ ತನ್ನ ಭಾರತೀಯ ಕಾರ್ಖಾನೆಗಳನ್ನು ರಫ್ತಿನ ಕಾರ್ಯತಂತ್ರದ ಕೇಂದ್ರವಾಗಿ ಪರಿವರ್ತಿಸಲು ನಿರ್ಧರಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಈ ಹಿಂದೆ ತನ್ನ ಭಾರತೀಯ ಘಟಕಗಳಲ್ಲಿ ತಯಾರಿಸಿದ ಕಾರುಗಳನ್ನು ರಫ್ತು ಮಾಡುವತ್ತ ಗಮನಹರಿಸಲು ನಿರಾಕರಿಸಿದ್ದ ಕಂಪನಿಯು ಈಗ ಅದನ್ನು ತನ್ನ ರಫ್ತುರ ಕಾರ್ಯಾಚರಣೆಯ ಅವಿಭಾಜ್ಯ ಅಂಗವಾಗಿ ಪರಿವರ್ತಿಸಲು ಹೊರಟಿರುವುದು ನಿಜಕ್ಕೂ ಮಹತ್ವದ ಬೆಳವಣಿಗೆ. ಕಂಪನಿಯು ಭಾರತದಲ್ಲಿ ಕಾರ್ಯಾಚರಣೆ ಆರಂಭಿಸಿದ ನಂತರ ಮೊದಲ ಬಾರಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರಫ್ತು ಮಾಡಲು ಯೋಜಿಸಿದೆ.
ಮೊದಲಿಗೆ, ಕಂಪನಿಯು ಭಾರತೀಯ ನಿರ್ಮಿತ ಸಿಟಿ ಸೆಡಾನ್ಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ರಫ್ತು ಮಾಡುತ್ತದೆ. ಇದು ಹೋಂಡಾ ತಯಾರಿಸಿದ ಭಾರತೀಯ ಕಾರುಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತದೆ, ಕಂಪನಿಯ ಭಾರತ ನಿರ್ಮಿತ ಪ್ರವೇಶ ಮಟ್ಟದ ಸೆಡಾನ್ ಅಮೇಜ್ ಮತ್ತು ಡಬ್ಲ್ಯುಆರ್-ವಿಗಳನ್ನು ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ನೆರೆಯ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ.
ಕಂಪನಿಯು ಭಾರತದಲ್ಲಿ 2.8 ಲಕ್ಷ ಯುನಿಟ್ಗಳ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದ್ದು, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಮತ್ತು ರಾಜಸ್ಥಾನದ ತಪುಕರದಲ್ಲಿ ಎರಡು ಘಟಕಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.