ವಾಷಿಂಗ್ಟನ್: ಟಿಕ್ಟಾಕ್ ತನ್ನ ಪೋಷಕ ರಾಷ್ಟ್ರವಾದ ಚೀನಾದೊಂದಿಗಿನ ಸಂಬಂಧವನ್ನು ಕಡಿತಗೊಳಿಸಬಹುದು ಮತ್ತು ಭಾರತ ಮಾಡಿದಂತೆ ನಿಷೇಧಕ್ಕೊಳಗಾಗುವುದನ್ನು ತಪ್ಪಿಸಲು ಶೇಕಡಾ 100 ರಷ್ಟು ಅಮೆರಿಕನ್ ಕಂಪನಿಯಾಗಬಹುದು ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಸಲಹೆಗಾರ ಲ್ಯಾರಿ ಕುಡ್ಲೋ ಹೇಳಿದ್ದಾರೆ.
“ಟಿಕ್ ಟಾಕ್ ಚೀನಾ ಮುನ್ನಡೆಸುತ್ತಿರುವ ಹೋಲ್ಡಿಂಗ್ ಕಂಪನಿಯಿಂದ ಹೊರಬರಲಿದೆ ಮತ್ತು ಸ್ವತಂತ್ರ ಅಮೇರಿಕನ್ ಕಂಪನಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಗುರುವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಟಿಕ್ಟಾಕ್ ಅನ್ನು ನಿಷೇಧಿಸಬೇಕೇ ಎಂಬ ಬಗ್ಗೆ ಯುಎಸ್ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ನಿರ್ಧಾರವನ್ನು ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೂಚಿಸುತ್ತಾರೆ ಎಂದು ಅವರು ಹೇಳಿದ್ದಾರೆ.
“ಟಿಕ್ಟಾಕ್ ಅನ್ನು ಬೈಟ್ಡ್ಯಾನ್ಸ್ ಟೆಕ್ನಾಲಜಿ ಕಂಪೆನಿಯು ನಿರ್ವಹಿಸುತ್ತದೆ. ಚೀನಾದಿಂದ ಹೊರಬರುವುದು ನಿಷೇಧಕ್ಕೆ ಒಳಗಾಗುವುದಕ್ಕಿಂತ ಉತ್ತಮ ಪರಿಹಾರವಾಗಿದೆ” ಎಂದು ಕುಡ್ಲೋ ಹೇಳಿದ್ದಾರೆ.
“ಇದರಿಂದ ಅದರ ಸೇವೆಗಳು ಯುಎಸ್ನಲ್ಲಿಯೇ ಇರುತ್ತವೆ ಮತ್ತು ಇದು ಶೇಕಡಾ ನೂರರಷ್ಟು ಅಮೆರಿಕನ್ ಕಂಪನಿಯಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಚೀನಾದ ಲಿಂಕ್ಗಳಿಲ್ಲದ ಯುಎಸ್ ಕಂಪನಿಯಾಗಿದ್ದರೆ, ಹೆಚ್ಚು ಜನಪ್ರಿಯವಾಗಿರುವ ಕಿರು ವಿಡಿಯೋ ಅಪ್ಲಿಕೇಶನ್ನ ನಿಷೇಧವನ್ನು ಭಾರತ ಮರುಪರಿಶೀಲಿಸಬಹುದು ಎಂದಿದ್ದಾರೆ.
ಭಾರತವು ತನ್ನ ರಕ್ಷಣಾ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಗಳನ್ನು ಉಲ್ಲೇಖಿಸಿ ಜೂನ್ 29 ರಂದು ಟಿಕ್ಟಾಕ್ ಮತ್ತು ಇತರ 58 ಚೀನೀ ಅಪ್ಲಿಕೇಶನ್ಗಳನ್ನು ನಿಷೇಧಿಸಿತು.
ಭಾರತವು ಚೀನಾದ ಹೊರಗೆ ಟಿಕ್ಟಾಕ್ನ ಅತಿದೊಡ್ಡ ಮಾರುಕಟ್ಟೆಯಾಗಿತ್ತು.ಭಾರತದಲ್ಲಿ ಸುಮಾರು 200 ಮಿಲಿಯನ್ ಬಳಕೆದಾರರು ಮತ್ತು 300 ಮಿಲಿಯನ್ ಡೌನ್ಲೋಡ್ಗಳು ಇದ್ದವು.
ಅಪ್ಲಿಕೇಶನ್ ಯುಎಸ್ಸ್ನಲ್ಲಿ 30 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.