ಅಗರ್ತಾಲಾ: ಭಾರತ-ಬಾಂಗ್ಲಾದೇಶದ ನಡುವಿನ ರೈಲ್ವೇ ಸಂಪರ್ಕ ಯೋಜನೆಗೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ.
ತ್ರಿಪುರದಲ್ಲಿ ಈ ರೈಲ್ವೇ ಯೋಜನೆಗೆ ಬೇಕಾದ ಭೂಮಿಯನ್ನು ಪಡೆಯಲು ಮತ್ತು ಹಳಿಯನ್ನು ನಿರ್ಮಿಸುವುದಕ್ಕಾಗಿ 580 ಕೋಟಿ ರೂಪಾಯಿಯನ್ನು ವೆಚ್ಚ ಮಾಡಲಾಗುತ್ತದೆ. ಬಾಂಗ್ಲಾ ಗಡಿಯಲ್ಲಿರುವ ಭೂಮಿಯನ್ನು ವಶಪಡಿಸುವುದಕ್ಕಾಗಿ ಮತ್ತು ಹಳಿ ನಿರ್ಮಿಸುವುದಕ್ಕಾಗಿ 400 ಕೋಟಿ ವ್ಯಯ ಮಾಡಲಾಗುತ್ತದೆ.
ಜೂನ್ 6-7ರಂದು ಬಾಂಗ್ಲಾಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದ ಸಂದರ್ಭ ಈ ರೈಲ್ವೇ ಸಂಪರ್ಕದ ಬಗ್ಗೆ ಅಲ್ಲಿನ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಮಾತುಕತೆ ನಡೆಸಿದ್ದರು.
ಬಾಂಗ್ಲಾ ಅಖೌರ ರೈಲ್ವೇ ನಿಲ್ದಾಣವನ್ನು ಅಗರ್ತಾಲಾ ಸಂಪರ್ಕಿಸುವಂತೆ ಸುಮಾರು 15.06 ಕಿ.ಮೀ ಉದ್ದದ ಹಳಿಯನ್ನು ನಿರ್ಮಿಸಲಾಗುತ್ತದೆ, ಇದರಲ್ಲಿ 5 ಕಿ.ಮೀ ಮಾತ್ರ ಭಾರತದ ಗಡಿ ಭಾಗದಲ್ಲಿ ಬರುತ್ತದೆ. ಉಳಿದವು ಬಾಂಗ್ಲಾ ಗಡಿಯಲ್ಲಿ ಬರುತ್ತದೆ. ಇದರ ನಿರ್ಮಾಣಕ್ಕಾಗಿ ರೈಲ್ವೇ ಅಧಿಕಾರಿಗಳು, ಎಂಜಿನಿಯರ್ಗಳು ಸಜ್ಜಾಗಿದ್ದಾರೆ.
ಪ್ರಸ್ತುತ ತ್ರಿಪುರದ ಅಗರ್ತಾಲದಿಂದ ಬಾಂಗ್ಲಾ 1,650 ಕಿ,ಮೀ ದೂರದಲ್ಲಿದೆ, ಈ ಯೋಜಿತ ರೈಲ್ವೇ ಸಂಪರ್ಕ ನಿರ್ಮಾಣವಾದರೆ ಈ ದೂರ 515ಕಿ.ಮೀಗೆ ಕಡಿತವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.