ಮೈಸೂರು: ಕೊರೋನಾವೈರಸ್ ಸಂಕಷ್ಟ ಜಗತ್ತನ್ನೇ ನಲುಗಿಸಿ ಬಿಟ್ಟಿದೆ. ಸ್ವಯಂ ನಿಯಂತ್ರಣವೇ ಕೊರೋನಾದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಕ್ಕೆ ಇರುವ ಅತ್ಯಂತ ಸಮರ್ಪಕ ಮಾರ್ಗ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಇನ್ನಿತರ ನಿಯಂತ್ರಣ ನಿಯಮಗಳನ್ನು ಅನುಸರಿಸುವ ಮೂಲಕ ಮಾತ್ರ ಸೋಂಕು ತಗುಲದಂತೆ ಕಾಪಾಡಿಕೊಳ್ಳಬಹುದು. ಹೀಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುವಂತಹ ಡಿವೈಸ್ ಒಂದನ್ನು ಮೈಸೂರಿನ ಸಂಶೋಧಕರ ತಂಡವೊಂದು ಸಂಶೋಧಿಸಿದೆ.
ಪ್ರಸ್ತುತ ಅಮೆರಿಕಾದಲ್ಲಿರುವ ಮೈಸೂರು ಮೂಲದ ರಾಹುಲ್ ರೆಡ್ಡಿ ನಾಡಿಕಟ್ಟು, ಸಿಕಂದರ್ ಮೊಹ್ಸಿನುದ್ದೀನ್ ಮಹಮ್ಮದ್ ಅವರನ್ನೊಳಗೊಂಡ ಭಾರತದ ಡಾ. ಪವನ್ ವಿಗ್ ಅವರ ತಂಡ ಈ ಉಪಕರಣವನ್ನು ಸಂಶೋಧನೆ ಮಾಡಿದೆ. ಕೈಯಲ್ಲಿ ಹಿಡಿದುಕೊಂಡೇ ಬಳಕೆ ಮಾಡಬಹುದಾದಂತಹ ಈ ಸಾಧನ, ಸೋಂಕಿನ ಲಕ್ಷಣಗಳಿಂದ ಬಳಲುತ್ತಿರುವವರಿಂದ ದೂರವಿರುವುದಕ್ಕೆ ಬಳಕೆದಾರನಿಗೆ ಸಹಾಯ ಮಾಡುತ್ತದೆ.
ಸೋಷಿಯಲ್ ಡಿಸ್ಟೆನ್ಸ್ ಡಿವೈಸ್ ನಮ್ಮ ಸುತ್ತಮುತ್ತ ಯಾರಾದರೂ ಸೋಂಕಿನ ಗುಣಲಕ್ಷಣಗಳಿಂದ ಬಳಲುತ್ತಿದ್ದರೆ ಈ ಡಿವೈಸ್ ತಕ್ಷಣವೇ ನಮ್ಮನ್ನು ಅಲರ್ಟ್ ಮಾಡುವ ಕೆಲಸವನ್ನು ಮಾಡುತ್ತದೆ. ಈ ಡಿವೈಸ್ ಬಳೆಕೆದಾರರಿಗಿಂತ ಅರು ಅಡಿ ದೂರದಲ್ಲಿ ಯಾರಾದರೂ ತೀವ್ರ ಜ್ವರದಿಂದ ಬಳಲುತ್ತಿದ್ದಲ್ಲಿ ಸದ್ದು ಮಾಡುವ ಮೂಲಕವೇ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಕೆಲಸವನ್ನು ಮಾಡುತ್ತದೆ.
ಈ ಸಾಧನವನ್ನು ಸಂಶೋಧಕರು ಮಾರುಕಟ್ಟೆಗೆ ಬಿಡಲು ನಿರ್ಧರಿಸಿದ್ದಾರೆ. ಇದನ್ನು ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ ಸೇರಿದಂತೆ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಕೊರೋನಾ ದಿಂದ ರಕ್ಷಿಸಿಕೊಳ್ಳಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ ಎಂಬುದು ಸಂಶೋಧಕರ ಅಭಿಪ್ರಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.