ನವದೆಹಲಿ: ಭಾರತ ಮತ್ತು ಚೀನಾ ನಡುವಿನ 15 ಗಂಟೆಗಳ ಸುದೀರ್ಘ ನಾಲ್ಕನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯ ಫಲಿತಾಂಶವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದ ಚೀನಾ ಸ್ಟಡಿ ಗ್ರೂಪ್ (CSG) ಬುಧವಾರ ಅವಲೋಕಿಸಿದೆ.
ಸಿಎಸ್ಜಿಯು ಸಂಪುಟ ಕಾರ್ಯದರ್ಶಿ, ಗೃಹ, ವಿದೇಶಾಂಗ ಮತ್ತು ರಕ್ಷಣಾ ಕಾರ್ಯದರ್ಶಿಗಳು ಮತ್ತು ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ಪ್ರತಿನಿಧಿಗಳನ್ನು ಒಳಗೊಂಡಿದೆ. ಇದು ಲಡಾಖ್ನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಶ್ರೇಣೀಕೃತ, ಪರಸ್ಪರ ಸಹಮತದ ಹಿಂಪಡೆಯುವಿಕೆ ಕುರಿತು ‘ಮುಂದಿನ ಕ್ರಮ’ ತೆಗೆದುಕೊಳ್ಳುತ್ತದೆ .
ನಾರ್ದನ್ ಸೇನಾ ಕಮಾಂಡರ್, ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಶಿ, ಎಲ್ಎಸಿಯ ಉದ್ದಕ್ಕೂ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಿಎಸ್ಜಿಗೆ ಮಾಹಿತಿ ನೀಡುವ ನೀಡಿದ್ದಾರೆ. ಮಂಗಳವಾರ ಚುಶುಲ್ನಲ್ಲಿ ನಡೆದ ಸಭೆಯ ನಂತರ ಚೀನಾದ ಕಡೆಯವರು ಇದೇ ರೀತಿಯ ಚರ್ಚೆಗಳನ್ನು ನಡೆಸಿದ್ದಾರೆಂದು ವರದಿಯಾಗಿದೆ. ಭಾಗಶಃ ಪ್ರಗತಿಯನ್ನು ಸೂಚಿಸುವ ಲೆಫ್ಟಿನೆಂಟ್ ಜನರಲ್ ಮಟ್ಟದ ಕಮಾಂಡರ್ಗಳ ಸಭೆ ಬುಧವಾರ ಮುಂಜಾನೆ 2 ಗಂಟೆಗೆ ಕೊನೆಗೊಂಡಿತು.
ಉಭಯ ರಾಷ್ಟ್ರಗಳ ನಡುವಿನ ಕಮಾಂಡರ್ ಮಟ್ಟದ ಸಭೆಯ ವಿವರಗಳು ತಿಳಿದಿಲ್ಲವಾದರೂ, ಮಾತುಕತೆಗಳು ಮುಖ್ಯವಾಗಿ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಎರಡನೇ ಹಂತದ ಸೇನಾ ನಿಯೋಜನೆ ಹಿಂಪಡೆಯುವಿಕೆ ಮೇಲೆ ಕೇಂದ್ರೀಕರಿಸಿದೆ ಎಂದು ನಂಬಲಾಗಿದೆ. ಮಾತುಕತೆ ಮಹತ್ವದ್ದಾಗಿತ್ತು ಏಕೆಂದರೆ ಇದು ಎಲ್ಎಸಿಯ ಉದ್ದಕ್ಕೂ ಮೊದಲ ಹಂತದ ಹಿಂಪಡೆಯುವಿಕೆ ನಂತರ ಭಾರತೀಯ ಮತ್ತು ಚೀನಾದ ಸೈನ್ಯದ ಹಿರಿಯ ಅಧಿಕಾರಿಗಳ ನಡುವಿನ ಮೊದಲ ಸಭೆಯಾಗಿದೆ.
ಗಡಿ ಪರಿಸ್ಥಿತಿಯನ್ನು ಸರಾಗಗೊಳಿಸುವಲ್ಲಿ ಮಾತುಕತೆ ಸಹಾಯ ಮಾಡುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ. ಗ್ಲೋಬಲ್ ಟೈಮ್ಸ್ ಬುಧವಾರ ಚೀನಾದ ವಿದೇಶಾಂಗ ಸಚಿವಾಲಯವನ್ನು ಉಲ್ಲೇಖಿಸಿ “ಚೀನಾ ಮತ್ತು ಭಾರತದ ಗಡಿ ಪಡೆಗಳು ಮಂಗಳವಾರ ತಮ್ಮ ನಾಲ್ಕನೇ ಕಮಾಂಡರ್ ಮಟ್ಟದ ಮಾತುಕತೆ ನಡೆಸಿದ್ದು, ಗಡಿಯ ಪಶ್ಚಿಮ ಭಾಗದಲ್ಲಿ ಮುಂಚೂಣಿ ಪಡೆಗಳನ್ನು ಮತ್ತಷ್ಟು ನಿಷ್ಕ್ರಿಯಗೊಳಿಸುವಲ್ಲಿ ಎರಡೂ ಕಡೆಯವರು ಸಕಾರಾತ್ಮಕ ಪ್ರಗತಿಯನ್ನು ಸಾಧಿಸಿದ್ದಾರೆ” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.