ವಾಷಿಂಗ್ಟನ್: ಚೀನಾದಿಂದ ಭಾರತಕ್ಕೆ ಮತ್ತು ಏಷ್ಯಾದ ಇತರ ದೇಶಗಳಿಗೆ ಎದುರಾಗುವ ಸವಾಲುಗಳನ್ನು ಎದುರಿಸಲು ವಿಶ್ವದ ಮುಕ್ತ ರಾಷ್ಟ್ರಗಳು ಒಟ್ಟಾಗಿ ಸೇರಲಿವೆ ಎಂಬ ವಿಶ್ವಾಸವಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಬುಧವಾರ ಹೇಳಿದ್ದಾರೆ.
“ನಾವು ಎದುರಿಸುತ್ತಿರುವ (ಚೀನಾದಿಂದ) ಸವಾಲಿನ ಸುತ್ತ ಇಡೀ ಜಗತ್ತು ಒಗ್ಗೂಡುತ್ತಿದೆ ಎಂದು ನಾನು ಭಾವಿಸುತ್ತೇನೆ. ಪ್ರಜಾಪ್ರಭುತ್ವಗಳು, ವಿಶ್ವದ ಮುಕ್ತ ರಾಷ್ಟ್ರಗಳು ಈ ಸವಾಲುಗಳನ್ನು ಮೆಟ್ಟಿ ನಿಲ್ಲಲು ಸಹಕರಿಸುತ್ತವೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ” ಎಂದು ಲಡಾಖ್ ಪ್ರದೇಶದಲ್ಲಿ ಭಾರತದೊಂದಿಗೆ ಚೀನಾದ ಮುಖಾಮುಖಿಯ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಹೇಳಿದರು.
ಭಾರತವು ಯುಎಸ್ ನ “ಪ್ರಮುಖ ಪಾಲುದಾರ” ಮತ್ತು ಭಾರತದ ವಿದೇಶಾಂಗ ಸಚಿವರೊಂದಿಗೆ ನನಗೆ ಉತ್ತಮ ಸಂಬಂಧವಿದೆ ಎಂದು ಅವರು ಹೇಳಿದರು. ನಾವು ವ್ಯಾಪಕವಾದ ಸಮಸ್ಯೆಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತೇವೆ. ಚೀನಾದೊಂದಿಗಿನ ಗಡಿ ಸಂಘರ್ಷದ ಬಗ್ಗೆ ನಾವು ಮಾತನಾಡಿದ್ದೇವೆ , ನಾವು ಚೀನಾದ ದೂರಸಂಪರ್ಕ ಮೂಲಸೌಕರ್ಯದಿಂದ ಹೊರಹೊಮ್ಮುವ ಬೆದರಿಕೆಯ ಬಗ್ಗೆ ಮಾತನಾಡಿದ್ದೇವೆ ಎಂದಿದ್ದಾರೆ.
ದೇಶದ ಭದ್ರತೆಗೆ ಧಕ್ಕೆ ತರುವ ಕಾರಣ 56 ಚೀನೀ ಆ್ಯಪ್ಗಳನ್ನು ದೇಶದೊಳಗೆ ಭಾರತ ನಿಷೇಧಿಸಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಏಷ್ಯಾದ ದೇಶಗಳ ಕಡಲ ಪ್ರದೇಶಗಳಲ್ಲಿ ಚೀನಾದ ಪ್ರತಿಪಾದನೆ ಮತ್ತು ಅದರ ಆಕ್ರಮಣಕಾರಿ ಕ್ರಮಗಳ ಕುರಿತು ಮಾತನಾಡಿದ ಅವರು, “ಯುಎಸ್ ತನ್ನಲ್ಲಿರುವ ಸಾಧನಗಳನ್ನು ಬಳಸುತ್ತದೆ, ಚೀನಾ ತಮ್ಮ ಪ್ರಾದೇಶಿಕ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಗುರುತಿಸುವ ವಿಶ್ವದಾದ್ಯಂತದ ಎಲ್ಲಾ ದೇಶಗಳನ್ನು ಮತ್ತು ಅವುಗಳ ಕಡಲ ಹಕ್ಕುಗಳನ್ನು ನಾವು ಬೆಂಬಲಿಸುತ್ತೇವೆ” ಎಂದಿದ್ದಾರೆ.
ಚೀನಾವು ಮಲೇಷ್ಯಾ, ಇಂಡೋನೇಷ್ಯಾ, ಬ್ರೂನಿ, ಫಿಲಿಪೈನ್ಸ್, ವಿಯೆಟ್ನಾಂ, ಜಪಾನ್ ಮತ್ತು ತೈವಾನ್ಗಳೊಂದಿಗೆ ಕಡಲ ಸಂಘರ್ಷಗಳನ್ನು ಹೊಂದಿದೆ ಮತ್ತು ಲಡಾಖ್ನಲ್ಲಿ ಅದರ ಸೈನ್ಯವು ಭಾರತೀಯ ಸೇನೆಯೊಂದಿಗೆ ಘರ್ಷಣೆ ನಡೆಸುತ್ತಿದೆ ಮತ್ತು ಈ ಪ್ರದೇಶದಲ್ಲಿ ತನ್ನ ಆಕ್ರಮಣಕಾರಿ ನಡವಳಿಕೆಯನ್ನು ಹೆಚ್ಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.