ನವದೆಹಲಿ: ಪರಿಶೀಲಿಸಿದ ಟ್ವಿಟರ್ ಖಾತೆಗಳನ್ನು ಹೊಂದಿದ್ದ ಜನಪ್ರಿಯ ಬಳಕೆದಾರರಾದ ವಾರೆನ್ ಬಫೆಟ್, ಜೆಫ್ ಬೆಜೋಸ್, ಬರಾಕ್ ಒಬಾಮ, ಜೋ ಬಿಡೆನ್, ಬಿಲ್ ಗೇಟ್ಸ್, ಜೋ ಬಿಡನ್, ಮತ್ತು ಎಲೋನ್ ಮಸ್ಕ್ ಅವರ ಟ್ವಿಟ್ಟರ್ ಖಾತೆಗಳನ್ನು ಬುಧವಾರ ಹ್ಯಾಕ್ ಮಾಡಲಾಗಿದೆ ಮತ್ತು ಅವರ ಖಾತೆಗಳನ್ನು ಪ್ರಮುಖ ಬಿಟ್ಕಾಯಿನ್ ಹಗರಣವನ್ನು ಟ್ವೀಟ್ ಮಾಡಲು ಬಳಸಲಾಗುತ್ತಿತ್ತು, ಓದುಗರಿಗೆ ನಿರ್ದಿಷ್ಟ URL ಮೂಲಕ ಬಿಟ್ಕಾಯಿನ್ಗಳನ್ನು ದಾನ ಮಾಡುವಂತೆ ಕೇಳಿಕೊಳ್ಳಲಾಗುತ್ತಿದೆ.
ಹ್ಯಾಕ್ ಗಮನಕ್ಕೆ ಬಂದ ನಂತರ, ಟ್ವಿಟರ್ ಎಲ್ಲಾ ಪರಿಶೀಲಿಸಿದ ಖಾತೆಗಳನ್ನು ಲಾಕ್ ಮಾಡಿದೆ. ಯಾವುದನ್ನೂ ಟ್ವೀಟ್ ಮಾಡದಂತೆ ಲಾಕ್ ಮಾಡಿದೆ. ಹ್ಯಾಕರ್ಗಳು ಅನೇಕ ಉನ್ನತ ಪ್ರೊಫೈಲ್ ಖಾತೆಗಳ ಮೇಲೆ ಹಿಡಿತ ಸಾಧಿಸಿದ್ದರಿಂದ ಈ ಹ್ಯಾಕ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ ಮತ್ತು ಕೆಲವು ಖಾತೆಗಳಲ್ಲಿ ಬಿಟ್ ಕಾಯಿನ್ ಹಗರಣದ ಬಗ್ಗೆ ಟ್ವಿಟ್ ಮಾಡಿರುವುದನ್ನು ನೋಡಿದರೆ, ಹ್ಯಾಕರ್ಗಳು ಇನ್ನಷ್ಟು ಹೆಚ್ಚಿನ ಹಾನಿಯುಂಟು ಮಾಡುವ ಟ್ವಿಟ್ಗಳನ್ನು ಮಾಡುವ ಆತಂಕ ಸೃಷ್ಟಿಯಾಗಿತ್ತು.
“ಬಿಟ್ ಕಾಯಿನ್ ಮುಖಾಂತರ ನನಗೆ ಹಣ ಕಳುಹಿಸಿ, ನಾನು ನಿಮಗೆ ಅದರ ಎರಡರಷ್ಟು ಹಣವನ್ನು ಹಿಂದಿರುಗಿಸುತ್ತೇನೆ” ಎಂಬ ಒಕ್ಕಣೆಯ ಟ್ವೀಟ್ ಗಳನ್ನು ಹ್ಯಾಕ್ ಆದ ಎಲ್ಲಾ ಅಕೌಂಟ್ ಮೂಲಕ ಟ್ವೀಟ್ ಮಾಡಲಾಗಿತ್ತು.
ಹ್ಯಾಕ್ ಬಗ್ಗೆ ಟ್ವೀಟ್ ಮಾಡಿರುವ ಟ್ವಿಟರ್, “ಟ್ವಿಟರ್ ಅಕೌಂಟ್ ಗಳ ಮೇಲೆ ಪರಿಣಾಮ ಬೀರುತ್ತಿರುವ ಭದ್ರತೆಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ನಮಗೆ ಗೊತ್ತಾಗಿದೆ. ಅದನ್ನು ನಾವು ಪತ್ತೆಹಚ್ಚಿ ತ್ತಿದ್ದೇವೆ. ಅಲ್ಲದೇ ಸರಿಪಡಿಸುತ್ತಿದ್ದೇವೆ. ಮುಂದಿನ ಪ್ರತಿ ಬೆಳವಣಿಗೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಾಗುವುದು” ಎಂದು ಟ್ವೀಟ್ ಮಾಡಿದೆ.
ಬಿಟ್ ಕಾಯಿನ್ ದಂಧೆಕೋರರೇ ಈ ಹ್ಯಾಕ್ ನಡೆಸಿದ್ದಾರೆ ಎಂಬ ಶಂಕೆ ಬಲವಾಗಿ ವ್ಯಕ್ತವಾಗಿದೆ.
We are aware of a security incident impacting accounts on Twitter. We are investigating and taking steps to fix it. We will update everyone shortly.
— Twitter Support (@TwitterSupport) July 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.