ಲಂಡನ್: ಕೊರೋನಾ ಉದ್ಭವವಾದ ಬಳಿಕ ಚೀನಾಗೆ ಜಾಗತಿಕ ಮಟ್ಟದಲ್ಲಿ ಮೇಲಿಂದ ಮೇಲೆ ಹೊಡೆತ ಅನುಭವಿಸುತ್ತಲೇ ಇದೆ. ಭಾರತ, ಚೀನಾ ಬಳಿಕ ಇದೀಗ ಬ್ರಿಟನ್ ಸಹ ತನ್ನ 5ಜಿ ಯೋಜನೆಯಿಂದ ಚೀನಾಕ್ಕೆ ಕೊಕ್ ನೀಡಿದೆ. ಬ್ರಿಟನ್ನ ಬೃಹತ್ ಟೆಲಿಕಾಂ ಸಂಸ್ಥೆ ತನ್ನ 5ಜಿ ಯೋಜನೆಯಿಂದ ಚೀನಾದ ಹುವಾಯಿಯನ್ನು ಕೈ ಬಿಡುವ ಮೂಲಕ ಮತ್ತೊಮ್ಮೆ ಚೀನಾ ಜಾಗತಿಕ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತೆ ಮಾಡಿದೆ.
ಅಮೆರಿಕ ಈ ಹಿಂದೆಯೇ ವಿಶ್ವ ಮಟ್ಟದಲ್ಲಿ ಚೀನಾ ಕುತಂತ್ರಗಳ ವಿರುದ್ಧ ಮಾತಾಡಿದ್ದು, ಆಕ್ರೋಶವನ್ನು ವ್ಯಕ್ತಪಡಿಸಿತ್ತು. ಅಮೆರಿಕಾ ಚೀನಾ ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದ್ದು, ಚೀನಾಗೆ ಬೆಂಬಲ ನೀಡದಂತೆ ಬ್ರಿಟನ್ಗೂ ಒತ್ತಡ ಹೇರಿತ್ತು. ಸದ್ಯ ಈ ಒತ್ತಡಕ್ಕೆ ಮಣಿದಿರುವ ಬ್ರಿಟನ್ ಚೀನಾಗೆ ಕೊಕ್ ನೀಡಿದೆ. ಆ ಮೂಲಕ ಕಳೆದ 20 ವರ್ಷಗಳಿಂದ ಚೀನಾ ನಿರ್ಮಿತ ಹುವಾಯಿ ಉಪಕರಣಗಳ ಮೇಲೆ ಅವಲಂಬಿತವಾಗಿದ್ದ ಬ್ರಿಟನ್, ಚೀನಾಗೆ ಮತ್ತೊಂದು ಆಘಾತ ನೀಡಿದೆ. ಮುಂದಿನ ದಿನಗಳಲ್ಲಿ ಚೀನಾದ ಟೆಲಿಕಾಂ ಸಂಬಂಧಿ ಉಪಕರಣಗಳ ಖರೀದಿಯನ್ನು ನಿಲ್ಲಿಸುತ್ತೇವೆ ಎಂದೂ ಹೇಳಿದೆ. ಆದರೆ ಬ್ರಿಟನ್ ಸರ್ಕಾರದ ಈ ಕ್ರಮದಿಂದಾಗಿ ಅಲ್ಲಿನ ಮೊಬೈಲ್ ಪ್ರೊವೈಡರ್ ಗಳು ಮಾತ್ರ ಸಮಸ್ಯೆ ಅನುಭವಿಸುವಂತಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಶ್ವೇತಭವನ, ಚೀನಾದ ವಿಶ್ವಾಸಾರ್ಹವಲ್ಲದ ಸಂಸ್ಥೆಗಳಿಗೆ ಬ್ರಿಟನ್ ನ ಈ ಕ್ರಮ ತಕ್ಕ ಶಾಸ್ತಿ ಮಾಡಿದಂತಾಗಿದೆ. ರಾಷ್ಟ್ರೀಯ ಭದ್ರತೆಗೆ ಚೀನಾ ಅಪಾಯಕಾರಿ ಎಂಬ ವಾದಕ್ಕೆ ಇದು ಪುಷ್ಟಿ ನೀಡಿದಂತಾಗಿದೆ. ಹುವಾಯಿ ಮತ್ತಿತರ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ವಿಶ್ವಾಸ ಕಳೆದುಕೊಂಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ಬೆಂಬಲಿತವಾಗಿದ್ದು, ಜಾಗತಿಕವಾಗಿ ಇದನ್ನು ಬಹಿಷ್ಕರಿಸುವ ಮೂಲಕ ಚೀನಾಗೆ ಪಾಠ ಕಲಿಸಬೇಕಾಗಿದೆ ಎಂದೂ ತಿಳಿಸಿದೆ.
ಆದರೆ ಬ್ರಿಟನ್ ನ ಈ ಕ್ರಮವನ್ನು ಖಂಡಿಸಿರುವ ಚೀನಾ, ಮುಂದಿನ ದಿನಗಳಲ್ಲಿ ಬ್ರಿಟನ್ ಇದರ ಪರಿಣಾಮ ಅನುಭವಿಸಲಿದೆ ಎಂದು ತಿಳಿಸಿದೆ. ಬ್ರಿಟನ್ ನ ಈ ನಿರ್ಧಾರ ಡಿಜಿಟಲ್ ಸ್ಲೋ ಲೇನ್ ಗೆ ಕಾರಣವಾಗಲಿರುವುದಾಗಿಯೂ ಎಚ್ಚರಿಕೆ ನೀಡಿದೆ. ಬ್ರಿಟನ್ ವಿದೇಶಿ ಉದ್ಯಮ ಸಂಸ್ಥೆಗಳಿಗೆ ಉದ್ಯಮಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುವುದೋ, ಇಲ್ಲವೋ ಎಂಬ ಸಂದೇಹ ಮೂಡುತ್ತದೆ ಎಂಬುದಾಗಿಯೂ ಬ್ರಿಟನ್ ನಲ್ಲಿರುವ ಚೀನಾ ರಾಯಭಾರಿ ಲಿಯು ಶಿಯೋಮಿಂಗ್ ತಿಳಿಸಿದ್ದಾರೆ. ಬ್ರಿಟನ್ ತೆಗೆದುಕೊಂಡಿರುವ ಈ ತಪ್ಪು ನಿರ್ಧಾರ ನಿರಾಸೆಯನ್ನು ಮೂಡಿಸಿದೆ ಎಂದೂ ಶಿಯೋಮಿಂಗ್ ಪ್ರತಿಕ್ರಿಯೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.