ಬೆಂಗಳೂರು: ಕಲೆಯನ್ನು ಪ್ರೀತಿಸದವರು ಯಾರಿದ್ದಾರೆ ಹೇಳಿ. ಹಲವು ಬಗೆಯ ಕಲೆಗಳನ್ನು ಕರಗತ ಮಾಡಿಕೊಂಡು ಆ ಮೂಲಕ ಬದುಕು ಕಟ್ಟಿಕೊಳ್ಳುವ, ಇತರರಿಗಿಂತ ಭಿನ್ನವಾಗಿ ನಿಲ್ಲುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಹೀಗೆಯೇ ಫೋಟೋಗ್ರಫಿ ಯನ್ನೇ ಉಸಿರು ಎಂದು ನಂಬಿರುವ ಬೆಳಗಾವಿಯ ವ್ಯಕ್ತಿಯೊಬ್ಬರು ಇದೀಗ ಕ್ಯಾಮರಾವನ್ನೇ ಹೋಲುವ ಮನೆಯೊಂದನ್ನು ನಿರ್ಮಾಣ ಮಾಡಿದ್ದು, ಆ ಮೂಲಕ ಜನರ ಗಮನ ಸೆಳೆದಿದ್ದಾರೆ.
ಅಂದ ಹಾಗೆ ಈ ವ್ಯಕ್ತಿಯ ಹೆಸರು ರವಿ ಹೊಂಗಲ್. ಎಳವೆಯಿಂದಲೂ ಛಾಯಾಚಿತ್ರ ಗ್ರಹಣ ಎಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ತಮ್ಮ ಮತ್ತು ಕೆಮರಾ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ರವಿ ಅವರು ಕ್ಯಾಮೆರಾವನ್ನೇ ಹೋಲುವ ಮನೆಯನ್ನು ನಿರ್ಮಾಣ ಮಾಡಿದ್ದು, ಎಲ್ಲರೂ ಮೂಗಿಗೆ ಬೆರಳೇರಿಸುವಂತೆ ಮಾಡಿದ್ದಾರೆ.
ಇನ್ನು ಕ್ಯಾಮೆರಾ ಮೇಲಿನ ತಮ್ಮ ಪ್ರೀತಿಯನ್ನು ತಮ್ಮ ಪುತ್ರರಿಗೆ ಇಡಲಾಗಿರುವ ಹೆಸರಿನ ಮೂಲಕವೂ ಪ್ರದರ್ಶಿಸಿದ್ದಾರೆ. ತಮ್ಮ ಮಕ್ಕಳಿಗೆ ಕ್ಯಾನನ್, ನಿಕಾನ್, ಎಪ್ಸಾನ್ ಎಂದು ಕೆಮರಾ ಬ್ರಾಂಡ್ ಗಳ ಹೆಸರನ್ನೇ ನಾಮಕರಣ ಮಾಡಿದ್ದಾರೆ. ಇನ್ನು ತಾವು ಹೊಸದಾಗಿ ನಿರ್ಮಾಣ ಮಾಡಿರುವ ಕ್ಯಾಮೆರಾ ಆಕಾರದ ಮನೆಯ ಮೇಲೆಯೂ ರವಿ ತಮ್ಮ ಪುತ್ರರ ಹೆಸರನ್ನು ಬರೆದಿದ್ದಾರೆ. ಸದ್ಯ ರವಿ ಅವರ ಈ ಹೊಸ ಶೈಲಿಯ ಮನೆ ಟ್ವೀಟರ್ ನಲ್ಲಿ ಸಕ್ಕತ್ ಟ್ರೆಂಡ್ ಸೃಷ್ಟಿಸಿದೆ. ಇನ್ನು ಈ ಮನೆ ನಿರ್ಮಾಣ ಕಾರ್ಯಕ್ಕೆ ರವಿ ಅವರು 95000 ಯುಎಸ್ ಡಾಲರ್ ಖರ್ಚು ಮಾಡಿದ್ದಾರೆ. ಮೂರು ಅಂತಸ್ಥಿನ ಮನೆ ಇದಾಗಿದ್ದು, ಮನೆಯ ಹೊರಭಾಗ ಲೆನ್ಸ್, ಫ್ಲ್ಯಾಶ್, ಮೆಮೊರಿ ಕಾರ್ಡ್, ಶೋ ರೀಲ್ ಮತ್ತು ವ್ಯೂ ಫೈಂಡರ್ ಗಳ ಆಕಾರದಲ್ಲಿದೆ ಎಂದೂ ತಿಳಿದು ಬಂದಿದೆ. ಅಲ್ಲದೆ ಮನೆಯ ಪ್ರತಿಯೊಂದು ಭಾಗಗಳೂ, ಕ್ಯಾಮೆರಾದ ಬೇರೆ ಬೇರೆ ಭಾಗಗಳನ್ನು ಹೋಲುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.