ಟೋಕಿಯೋ: ಸಾಂಕ್ರಾಮಿಕ ಪಿಡುಗು ಕೊರೋನಾ ಸೋಂಕು ಮತ್ತು ಪ್ರಾದೇಶಿಕತೆಯ ವಿಚಾರದಲ್ಲಿ ಚೀನಾವು ಸುಳ್ಳು ಮಾಹಿತಿಗಳನ್ನು ಹರಡಿ ತಪ್ಪು ದಾರಿಗೆಳೆಯುತ್ತಿದೆ ಎಂದು ಜಪಾನ್ ತನ್ನ ವಾರ್ಷಿಕ ರಕ್ಷಣಾ ಶ್ವೇತಪತ್ರದಲ್ಲಿ ಆರೋಪಿಸಿದೆ.
ಚೀನೀಯರಿಂದ ಡಿಯೊಯೋ ದ್ವೀಪ ಎಂದೇ ಕರೆಸಿಕೊಳ್ಳಲಾಗುತ್ತಿರುವ ಪ್ರದೇಶದಲ್ಲಿ ಸಮುದ್ರದಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸುವ ಕೆಲಸಕ್ಕೆ ಚೀನಾ ಮುಂದಾಗಿದೆ. ಇಂತಹ ಪ್ರಯತ್ನಗಳನ್ನು ಚೀನಾ ಎಡೆಬಿಡದೆ ನಡೆಸಿಕೊಂಡೇ ಬರುತ್ತಿದೆ ಎಂದೂ ಜಪಾನ್ ದೂರಿದೆ. ಕಳೆದ 30 ವರ್ಷಗಳಿಗೂ ಅಧಿಕ ಸಮಯದಿಂದ ಚೀನಾ ಇಂತಹ ಕುತಂತ್ರಗಳನ್ನು ನಡೆಸುತ್ತಲೇ ಬರುತ್ತಿದೆ ಎಂದೂ ಜಪಾನ್ ತನ್ನ ಶ್ವೇತಪತ್ರದಲ್ಲಿ ಗುರುತರ ಆರೋಪ ಮಾಡಿದೆ.
ಅದಲ್ಲದೆ ಕೊರೋನಾವೈರಸ್ ಅನ್ನು ಅಮೆರಿಕಾದ ಭದ್ರತಾ ಪಡೆಗಳು ಚೀನಾಗೆ ತಂದಿವೆ ಮತ್ತು ಗಿಡಮೂಲಿಕೆಗಳಿಂದ ಕೊರೋನಾ ನಿವಾರಣೆ ಸಾಧ್ಯ ಎಂಬುದಾಗಿಯೂ ಚೀನಾ ವಕ್ತಾರರು ಟ್ವೀಟ್ ಮಾಡಿರುವುದನ್ನು ಸಹ ಶ್ವೇತಪತ್ರದಲ್ಲಿ ಉಲ್ಲೇಖ ಮಾಡಿರುವ ಜಪಾನ್, ಇಂತಹ ಸುಳ್ಳು ಮಾಹಿತಿಗಳನ್ನು ನೀಡುವ ಮೂಲಕ ಚೀನಾ ಜಗತ್ತನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದೂ ಹೇಳಿದ್ದಾರೆ.
ಜೊತೆಗೆ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲಾ ದೇಶಗಳೂ ತಮ್ಮ ಮಿಲಿಟರಿ ಸೇವೆಯನ್ನು ದೇಶದ ಬಿಕ್ಕಟ್ಟಿಗೆ ಬಳಕೆ ಮಾಡಿಕೊಳ್ಳುತ್ತವೆ. ಇದು ಹೆಚ್ಚಿನ ದೇಶಗಳ ಮಧ್ಯೆ ರಕ್ಷಣಾ ಕಾರ್ಯತಂತ್ರಗಳ ಸ್ಪರ್ಧೆ ಏರ್ಪಡಿಸುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ ಎಂದು ಜಪಾನ್ ಅಭಿಪ್ರಾಯ ಮಂಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.