ನವದೆಹಲಿ: ಬ್ರಹ್ಮಪುತ್ರ ನದಿಯ ಅಡಿಯಲ್ಲಿ ಕಾರ್ಯತಂತ್ರದ ಸುರಂಗವನ್ನು ನಿರ್ಮಿಸಲು ಕೇಂದ್ರವು ತಾತ್ವಿಕವಾಗಿ ಅನುಮೋದನೆ ನೀಡಿದೆ ಎಂದು ವರದಿಗಳು ತಿಳಿಸಿವೆ. ನಾಲ್ಕು ಪಥಗಳ ಸುರಂಗವು ಅಸ್ಸಾಂನ ಗೋಹ್ಪುರ ಮತ್ತು ನುಮಾಲಿಗ ಪಟ್ಟಣಗಳನ್ನು ಸಂಪರ್ಕಿಸಲಿದೆ.
ಭಾರತವು ಮೊದಲ ಬಾರಿಗೆ ನದಿಯ ಕೆಳಗೆ ಸುರಂಗವನ್ನು ನಿರ್ಮಿಸಲಿದೆ ಎಂದು ವರದಿಗಳು ತಿಳಿಸಿವೆ ಮತ್ತು ಇದು ಚೀನಾದ ಗಡಿಗೆ ಹತ್ತಿರದಲ್ಲಿ ಇರಲಿದೆ. ಜಿಯಾಂಗ್ಸು ಪ್ರಾಂತ್ಯದ ತೈಹು ಸರೋವರದ ಕೆಳಗೆ ಚೀನಾ ನಿರ್ಮಿಸುತ್ತಿರುವ ಅಂಡರ್ ವಾಟರ್ ಸುರಂಗಕ್ಕಿಂತ ಇದು ಹೆಚ್ಚು ಉದ್ದವಾಗಿರುತ್ತದೆ ಎಂದು ಹೇಳಲಾಗಿದೆ.
ಭಾರತದ ಈ ಯೋಜಿತ ಸುರಂಗವು ಕಾರ್ಯತಾಂತ್ರಿಕವಾಗಿ ಬಹಳ ಪ್ರಾಮುಖ್ಯವಾಗಲಿದೆ. ಏಕೆಂದರೆ ಇದು ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವೆ ವರ್ಷಪೂರ್ತಿ ಸಂಪರ್ಕವನ್ನು ಒದಗಿಸುತ್ತದೆ. ಮಿಲಿಟರಿ ಸರಬರಾಜು ಮತ್ತು ಮದ್ದುಗುಂಡುಗಳನ್ನು ಸಾಗಿಸಲು ಸಹ ಇದು ಸಹಾಯ ಮಾಡುತ್ತದೆ, ಯಾಕೆಂದರೆ ಇಲ್ಲಿ ವಾಹನಗಳಿಗೆ ಸುರಂಗದಲ್ಲಿ 80 ಕಿ.ಮೀ ವೇಗದಲ್ಲಿ ಜೂಮ್ ಪಾಸ್ಟ್ ಮಾಡಲು ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHAIDCL) ಅಮೆರಿಕದ ಲೂಯಿಸ್ ಬರ್ಗರ್ ಕಂಪನಿಯನ್ನು ಇದಕ್ಕಾಗಿ ಆಯ್ಕೆ ಮಾಡಿದೆ. ವಾಸ್ತವವಾಗಿ, ಕೇಂದ್ರ ಸರ್ಕಾರವು ತನ್ನ ವಿವರವಾದ ಯೋಜನಾ ವರದಿಯನ್ನು ಮಾರ್ಚ್ನಲ್ಲೇ ಅಂಗೀಕರಿಸಿದೆ ಎಂದು ವರದಿ ತಿಳಿಸಿದೆ.
14.85 ಕಿ.ಮೀ ಉದ್ದದ ಸುರಂಗದ ನಿರ್ಮಾಣವು ಡಿಸೆಂಬರ್ನಲ್ಲಿ ಪ್ರಾರಂಭವಾಗಲಿದೆ ಎಂದು NHAIDCLನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುವುದು ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.