ನವದೆಹಲಿ: ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಆರೋಗ್ಯವಂತ ಜೀವನಶೈಲಿಯನ್ನು ಕಲ್ಪಿಸಲು ವಿಶ್ವಸಂಸ್ಥೆ ಮಹತ್ವದ ಉಪಕ್ರಮವನ್ನು ಕೈಗೆತ್ತಿಕೊಂಡಿದೆ. ಜಾಗತಿಕವಾಗಿ 1.3 ಶತಕೋಟಿ ತಂಬಾಕು ಬಳಕೆದಾರರನ್ನು ಅವರ ದುರಾಭ್ಯಾಸದಿಂದ ದೂರ ಮಾಡಲು ಉಪ್ರಕಮವನ್ನು ಆಯೋಜಿಸುವುದಾಗಿ ಅದು ಘೋಷಣೆ ಮಾಡಿದೆ.
ತಂಬಾಕನ್ನು ತ್ಯಜಿಸುವ ಉಪಕ್ರಮವು ಜನರಿಗೆ ತಂಬಾಕನ್ನು ತ್ಯಜಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಮುಕ್ತವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಅಂದರೆ ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ಮತ್ತು ಸಲಹೆಗಾಗಿ ಡಿಜಿಟಲ್ ಆರೋಗ್ಯ ಕಾರ್ಯಕರ್ತರ ಲಭ್ಯತೆ ಅವರಿಗೆ ಸಿಗಲಿದೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಮಾಹಿತಿಯನ್ನು ನೀಡಿದ್ದಾರೆ.
ಯುಎನ್ ಆರೋಗ್ಯ ಸಂಸ್ಥೆಯ ಪ್ರಕಾರ, ಧೂಮಪಾನವು ವರ್ಷಕ್ಕೆ 8 ಮಿಲಿಯನ್ ಜನರನ್ನು ಕೊಲ್ಲುತ್ತಿದೆ ಮತ್ತು ಧೂಮಪಾನಿಗಳು ಧೂಮಪಾನಿಗಳಲ್ಲದವರಿಗಿಂತ ಹೆಚ್ಚು ದುರ್ಬಲರಾಗಿರುತ್ತಾರೆ, ಅವರಿಗೆ ಕೋವಿಡ್-19ನಂತಹ ರೋಗಗಳು ಹೆಚ್ಚು ಹಾನಿಯುಂಟು ಮಾಡುತ್ತವೆ ಎಂದಿದ್ದಾರೆ.
“ಆದರೆ ಧೂಮಪಾನಿಗಳಿಗೆ ಅಭ್ಯಾಸವನ್ನು ಬಿಡಲು ಹೆಚ್ಚಿನ ಪ್ರೇರಣೆ ಅಗತ್ಯವಿದೆ, ಸಾಂಕ್ರಾಮಿಕವು ಸರಿಯಾದ ಪ್ರೋತ್ಸಾಹವನ್ನು ನೀಡುತ್ತದೆ” ಎಂದು ಟೆಡ್ರೊಸ್ ಹೇಳಿದ್ದಾರೆ.
ಈ ಉಪಕ್ರಮವನ್ನು ಡಬ್ಲ್ಯುಎಚ್ಒ, ಯುಎನ್ ಇಂಟರಾಜೆನ್ಸಿ ಟಾಸ್ಕ್ ಫೋರ್ಸ್ ಜಂಟಿಯಾಗಿ ಕೈಗೆತ್ತಿಕೊಳ್ಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.