ನವದೆಹಲಿ: ಸಾಂಕ್ರಾಮಿಕ ಕೊರೋನಾವೈರಸ್ ಪ್ರಸರಣದ ಸಂದರ್ಭದಲ್ಲೂ ಭಾರತ ಸೋಲಾರ್ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಉದಾಹರಣೆಯನ್ನು ಮುಂದಿಟ್ಟಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಗುರುವಾರ ಹೇಳಿದ್ದಾರೆ.
ವಿಶ್ವವು ಕೋವಿಡ್-19 ಚೇತರಿಕೆ ಯೋಜನೆಗಳನ್ನು ವಿನ್ಯಾಸಗೊಳಿಸುತ್ತಿರುವ ಮತ್ತು ಅನುಷ್ಠಾನಗೊಳಿಸುತ್ತಿರುವ ಈ ಸಂದರ್ಭದಲ್ಲಿ ಎರಡು ಆಯ್ಕೆಗಳಿವೆ, ಒಂದು ಸುಸ್ಥಿರ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಅಥವಾ ಹಿಂದಿನ ಸ್ಥಿತಿಯನ್ನೇ ಮುಂದುವರೆಸುವುದು ಎಂದು ಅವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಇಂಧನ ಮಂಡಳಿಯ ಕ್ಲೀನ್ ಎನರ್ಜಿ ಟ್ರಾನ್ಸಿಶನ್ ಸಮಿತ್ನಲ್ಲಿ ಭಾರತದ ಸನ್ನಿವೇಶವನ್ನು ಉಲ್ಲೇಖಿಸಿದ ಅವರು, ಸಾಂಕ್ರಾಮಿಕ ರೋಗದ ನಡುವೆಯೂ ಭಾರತದ ಸೌರ ಹರಾಜು ಜನಪ್ರಿಯತೆಯನ್ನು ಕಂಡಿದೆ ಎಂದು ಹೇಳಿದ್ದಾರೆ.
“ಇಂದು, ಕೋವಿಡ್ -19 ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ತೆರಿಗೆದಾರರ ಟ್ರಿಲಿಯನ್ ಡಾಲರ್ಗಟ್ಟಲೆ ಹಣವನ್ನು ಚೇತರಿಕೆಯ ಕಾರ್ಯತಂತ್ರಗಳಿಗೆ ಹೂಡುವ ಮೂಲಕ ರಾಷ್ಟ್ರಗಳು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ” ಎಂದು ವರ್ಚುವಲ್ ಉದ್ಘಾಟನಾ ಶೃಂಗಸಭೆಯಲ್ಲಿ ಅವರು ಹೇಳಿದರು. ಭಾರತ ಮತ್ತು ಚೀನಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಚೀನಾ ಮತ್ತು ಭಾರತ ಶೇ.80ರಷ್ಟು ಇಂಧನ ಬಳಕೆ ಮತ್ತು ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.