ನ್ಯೂಯಾರ್ಕ್: ಅಮಲು ಪದಾರ್ಥ ಬಿಯರ್ಗೆ ಹಿಂದೂ ದೇವರ ಹೆಸರಿಡುವ ಮೂಲಕ ಹಿಂದೂ ಧರ್ಮೀಯರ ಮನಸ್ಸಿಗೆ ನೋವನ್ನುಂಟು ಮಾಡುವ ಕೆಲಸವನ್ನು ಬೆಲ್ಜಿಯಂನ ಬಿಯರ್ ಬ್ರೆವರಿ ಅನ್ಶ್ಯೂಸರ್- ಬುಶ್ ಇನ್ಬೆವ್ ಮಾಡಿದೆ. ಬಿಯರ್ಗೆ ಬ್ರಹ್ಮ ಎಂದು ಹೆಸರಿಡುವ ಮೂಲಕ ಹೊಸ ಅವಾಂತರ ಸೃಷ್ಟಿಸಿದೆ. ಅಲ್ಲದೆ ಕೆಲವು ದೇಶಗಳಲ್ಲಿ ಬಿಯರ್ನ ಜಾಹೀರಾತಿನಲ್ಲಿ ತುಂಡುಡುಗೆಯ ಯುವತಿಯರನ್ನು ತೋರಿಸಲಾಗುತ್ತಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ, ಬೆಲ್ಜಿಯಂ ಸರ್ಕಾರ ಮತ್ತು ಬಿಯರ್ ಬ್ರೆವರಿ ಅನ್ಶ್ಯೂಸರ್ ಗೆ ಪತ್ರ ಬರೆದಿದ್ದು, ಇದರ ಹೆಸರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದೆ.
ಈ ಕುರಿತಂತೆ ಮಾತನಾಡಿರುವ ಯುನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂನ ಅಧ್ಯಕ್ಷ ರಾಜನ್ ಝಡ್, ಹಿಂದೂ ಧರ್ಮದಲ್ಲಿ ದೇವರಾಗಿ ಬ್ರಹ್ಮ ಸ್ಥಾನ ಪಡೆದಿದ್ದಾನೆ. ಅವನನ್ನು ಸೃಷ್ಟಿಕರ್ತ ಎಂಬುದಾಗಿ ಭಕ್ತರು ನಂಬುತ್ತಾರೆ. ಹೀಗೆ ಪೂಜಿಸಲ್ಪಡುವ ದೇವರನ್ನು ವ್ಯಾಪಾರದ ದೃಷ್ಟಿಯಿಂದ ಈ ರೀತಿಯಾಗಿ ದುರುಪಯೋಗಮಾಡಿಕೊಳ್ಳುವ ಕ್ರಮ ತಪ್ಪು ಎಂಬುದಾಗಿಯೂ ಹೇಳಿದ್ದಾರೆ.
ವ್ಯಾಪಾರ ವಹಿವಾಟುಗಳನ್ನು ನಡೆಸಲು ಧಾರ್ಮಿಕ ನಂಬಿಕೆಗಳಿಗೆ ಏಟು ನೀಡುವ ಕ್ರಮ ಸರಿಯಲ್ಲ. ಅಲ್ಲದೆ ಮಹಿಳೆಯರನ್ನು ಅಶ್ಲೀಲ ಜಾಹೀರಾತುಗಳಿಗೆ ಬಳಸಿ ಜನರನ್ನು ಸೆಳೆಯುವ ಮೂಲಕ ತಮ್ಮ ವ್ಯಾಪಾರ ಹೆಚ್ಚಿಸುವಂತೆ ಮಾಡಿಕೊಳ್ಳುವುದು ಮಹಿಳೆಯರಿಗೆ ತೋರುವ ಅಗೌರವ. ಅಲ್ಲದೆ ದೇವರುಗಳ ಹೆಸರನ್ನು ಬಳಸುವುದು ಜನರ ಧಾರ್ಮಿಕ ನಂಬಿಕೆ ಮತ್ತು ದೇವರುಗಳಿಗೆ ನೀಡುವ ಅಗೌರವಾಗಿದೆ. ಆದ್ದರಿಂದ ಕೂಡಲೇ ಬಿಯರ್ ಹೆಸರನ್ನು ಬದಲಾಯಿಸಬೇಕು ಎಂದೂ ಝೆಡ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.