ವಾಷಿಂಗ್ಟನ್: ಶಾಂತಿ, ಕರುಣೆಯ ಮೂಲಕವೇ ಖ್ಯಾತರಾಗಿರುವ ಆಧ್ಯಾತ್ಮಿಕ ಗುರು ಟಿಬೆಟ್ನ ದಲೈಲಾಮಾ ಅವರಿಗೆ ಆಶ್ರಯ ನೀಡಿದ ಭಾರತಕ್ಕೆ ಅಮೆರಿಕ ಕೃತಜ್ಞತೆ ಸಲ್ಲಿಸಿದೆ. ಅವರ 85ನೇ ವರ್ಷದ ಜನ್ಮದಿನಾಚರಣೆಗೆ ಶುಭಾಶಯ ಕೋರಿದ ಅಮೆರಿಕಾ ಬಳಿಕ ಭಾರತಕ್ಕೂ ಕೃತಜ್ಞತೆ ತಿಳಿಸಿದೆ.
ದಲೈಲಾಮಾ ಅವರ ಜನ್ಮ ದಿನಾಚರಣೆಗೆ ಶುಭಾಶಯ ಕೋರಿ ಟ್ವೀಟ್ ಮಾಡಿರುವ ಅಮೆರಿಕ ಗೃಹ ಸಚಿವಾಲಯದ ದಕ್ಷಿಣ ಹಾಗೂ ಮಧ್ಯ ಏಷ್ಯಾದ ವ್ಯವಹಾರಗಳ ವಿಭಾಗ, “ಶಾಂತಿ, ಕರುಣೆಯ ಮಂತ್ರವನ್ನು ಜಗತ್ತಿಗೆ ಸಾರಿರುವ ಆಧ್ಯಾತ್ಮಿಕ ಗುರು ದಲೈಲಾಮಾ ಅವರಿಗೆ 85 ನೇ ಜನ್ಮ ಜಯಂತಿಯ ಶುಭಾಶಯಗಳು. 1959 ರಿಂದ ದಲೈಲಾಮಾ ಅವರಿಗೆ ಆಶ್ರಯವನ್ನು ನೀಡಿರುವ ಭಾರತ ದೇಶಕ್ಕೂ ಅಮೆರಿಕ ಈ ಸಂದರ್ಭದಲ್ಲಿ ಧನ್ಯವಾದ ಸಮರ್ಪಿಸುತ್ತದೆ” ಎಂದು ಹೇಳಿದೆ.
ಚೀನಾ ದೇಶವು ಟಿಬೆಟ್ ಮೇಲೆ ನಡೆಸಿದ ಆಕ್ರಮಣಕಾರಿ ನೀತಿಯ ಕಾರಣದಿಂದಾಗಿ ದಲೈಲಾಮಾ ಅವರು ಭಾರತಕ್ಕೆ ಬಂದು ಆಶ್ರಯ ಪಡೆಯಬೇಕಾಗಿದೆ. ಸ್ವಾತಂತ್ರ್ಯ ಪಡೆಯುವ ಸಲುವಾಗಿ ಟಿಬೆಟ್ ಜನರು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು ಚೀನಾ ತೆಗೆದುಕೊಂಡ ಆತಂಕಕಾರಿ ನಡೆಯ ಪರಿಣಾಮವಾಗಿಯೇ ಅವರು ಟಿಬೆಟ್ ಬಿಟ್ಟರು. ಚೀನಾದ ಇಂತಹ ದರ್ಪವನ್ನು ಅಮೆರಿಕಾ ಖಂಡಿಸುವುದಾಗಿ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪಲೊಸಿ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.