ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೇಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಕ್ಷಣಾ ಸಂಸತ್ತಿನ ಸ್ಥಾಯಿ ಸಮಿತಿಯ ಒಂದೇ ಒಂದು ಸಭೆಯಲ್ಲಿ ಭಾಗವಹಿಸದ ರಾಹುಲ್ ಅವರು, ಸಶಸ್ತ್ರ ಪಡೆಗಳ ಶೌರ್ಯವನ್ನು ಪದೇ ಪದೇ ಪ್ರಶ್ನಿಸುತ್ತಿದ್ದಾರೆ ಮತ್ತು ದೇಶವನ್ನು ನಿರಾಶೆಗೊಳಿಸುತ್ತಿದ್ದಾರೆ ಎಂದಿದ್ದಾರೆ.
ಟ್ವಿಟ್ ಮಾಡಿರುವ ನಡ್ಡಾ ಅವರು, “ಒಬ್ಬ ಜವಾಬ್ದಾರಿಯುತ ಪ್ರತಿಪಕ್ಷದ ನಾಯಕ ಮಾಡಬಾರದ ಎಲ್ಲವನ್ನೂ ರಾಹುಲ್ ಮಾಡುತ್ತಿದ್ದಾರೆ” ಎಂದಿದ್ದಾರೆ.
“ರಾಹುಲ್ ಗಾಂಧಿ ಅವರು ರಕ್ಷಣಾ ಸ್ಥಾಯಿ ಸಮಿತಿಯ ಒಂದೇ ಒಂದು ಸಭೆಯಲ್ಲಿ ಭಾಗವಹಿಸುವುದಿಲ್ಲ. ಆದರೆ ದುಃಖಕರವೆಂದರೆ, ಅವರು ರಾಷ್ಟ್ರವನ್ನು ನಿರಾಶೆಗೊಳಿಸುತ್ತಿದ್ದಾರೆ, ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರಶ್ನಿಸುತ್ತಾರೆ ಮತ್ತು ಜವಾಬ್ದಾರಿಯುತ ಪ್ರತಿಪಕ್ಷದ ನಾಯಕನು ಮಾಡಬಾರದ ಎಲ್ಲವನ್ನೂ ಮಾಡುತ್ತಾರೆ” ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.
“ರಾಹುಲ್ ಗಾಂಧಿ ಎಂತಹ ಅದ್ಭುತ ಸಂಪ್ರದಾಯಕ್ಕೆ ಸೇರಿದವರೆಂದರೆ, ಅಲ್ಲಿ ರಕ್ಷಣೆಗೆ ಸಂಬಂಧಿಸಿದಂತೆ ಸಮಿತಿಗಳು ಬೇಕಾಗಿಲ್ಲ, ಆದರೆ ಕಮಿಷನ್ಗಳು ಬೇಕು. ಕಾಂಗ್ರೆಸ್ ಸಂಸತ್ತಿನ ವಿಷಯಗಳನ್ನು ಅರ್ಥಮಾಡಿಕೊಳ್ಳಬಲ್ಲ ಅನೇಕ ಅರ್ಹ ಸದಸ್ಯರನ್ನು ಹೊಂದಿದೆ ಆದರೆ ಒಂದು ವಂಶವು ಅಂತಹ ನಾಯಕರನ್ನು ಬೆಳೆಯಲು ಎಂದಿಗೂ ಬಿಡುವುದಿಲ್ಲ. ನಿಜವಾಗಿಯೂ ಇದು ದುಃಖಕರವಾಗಿದೆ” ಎಂದಿದ್ದಾರೆ.
Rahul Gandhi belongs to that glorious dynastic tradition where as far as defence is concerned, committees don’t matter, only commissions do.
Congress has many deserving members who understand parliamentary matters but one dynasty will never let such leaders grow. Really sad.— Jagat Prakash Nadda (@JPNadda) July 6, 2020
Rahul Gandhi does not attend a single meeting of Standing Committee on Defence. But sadly, he continues to demoralise the nation, question the valour of our armed forces and do everything that a responsible opposition leader should not do.
— Jagat Prakash Nadda (@JPNadda) July 6, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.