ಸಿಡ್ನಿ: ಹಾಂಕಾಂಗ್ನಲ್ಲಿ ಚೀನಾ ಮತ್ತಷ್ಟು ಕಠಿಣ ಕಾನೂನು, ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಕಾರಣದಿಂದ ಹಾಂಗ್ಕಾಂಗ್ನ ಜನರಿಗೆ ಆಶ್ರಯ ನೀಡಲು ಆಸ್ಟ್ರೇಲಿಯಾ ಮುಂದಾಗಿದ್ದು, ಇದರಿಂದ ಚೀನಾ ಮತ್ತು ಆಸ್ಟ್ರೇಲಿಯಾ ನಡುವಿನ ಸಂಬಂಧ ಹಳಸುವ ಸಾಧ್ಯತೆಗಳು ಹೆಚ್ಚಾಗಿವೆ.
ಈ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಪ್ರಸ್ತುತ ಹಾಂಕಾಂಗ್ ಜನರ ಪರಿಸ್ಥಿತಿ ಆತಂಕಕಾರಿಯಾಗಿದೆ. ಅಲ್ಲಿನ ಜನರಿಗೆ ಆಸ್ಟ್ರೇಲಿಯಾ ಆಶ್ರಯವನ್ನು ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಆಸ್ಟ್ರೇಲಿಯಾ ಹಾಂಗ್ಕಾಂಗ್ನ ಜನರಿಗೆ ಸುರಕ್ಷತೆಯನ್ನು ಒದಗಿಸಲಿದೆ ಎಂದೂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
23 ವರ್ಷಗಳ ಹಿಂದೆ ಬ್ರಿಟಿಷ್ ಆಡಳಿತದಲ್ಲಿದ್ದ ಹಾಂಗ್ಕಾಂಗ್ ಚೀನಾ ಅಧಿಪತ್ಯಕ್ಕೆ ಒಳಪಟ್ಟಿತ್ತು. ಈ ಸಂದರ್ಭದಲ್ಲಿ ಮುಂದಿನ 50 ವರ್ಷಗಳಿಗೆ ಸಂಬಂಧಿಸಿದಂತೆ ಹಾಂಕಾಂಗ್ ನ ಶಾಸನ ಸಭೆ ಮತ್ತು ನ್ಯಾಯಿಕ ವಿಚಾರಗಳ ಸ್ವಾಯತ್ತತೆ ಕಾಪಾಡಿಕೊಳ್ಳಬೇಕು ಎಂದೂ ತಿಳಿಸಲಾಗಿತ್ತು. ಆದರೆ ಈಗ ಚೀನಾ ಈ ಶಾಸನವನ್ನು ಗಾಳಿಗೆ ತೂರಿದ್ದು, ಒಂದು ರಾಷ್ಟ್ರ, ಎರಡು ಆಡಳಿತ ವ್ಯವಸ್ಥೆ ನಿಯಮಗಳನ್ನು ಉಲ್ಲಂಘನೆ ಮಾಡಿರುವುದಾಗಿಯೂ ತಿಳಿದು ಬಂದಿದೆ.
ಇನ್ನು ಆಸ್ಟ್ರೇಲಿಯಾ ತೆಗೆದುಕೊಂಡಿರುವ ಈ ಕ್ರಮಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಚೀನಾ ನಿಯಮ ಉಲ್ಲಂಘನೆ ಮಾಡಿದೆ ಎಂಬ ಆಸ್ಟ್ರೇಲಿಯಾದ ಆರೋಪವನ್ನು ತಳ್ಳಿ ಹಾಕಿದೆ. ಜೊತೆಗೆ ಚೀನಾ ತನ್ನ ಪ್ರಜೆಗಳಿಗೆ ಆಸ್ಟ್ರೇಲಿಯಾಗೆ ತೆರಳದಂತೆ ಸೂಚಿಸಿದೆ. ಅಲ್ಲಿನ ವಸ್ತುಗಳಿಗೂ ವಾಣಿಜ್ಯ ನಿರ್ಬಂಧ ಹೇರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.