ಬೆಂಗಳೂರು: ಭಾರತೀಯ ವಾಯುಪಡೆಯ ಯುದ್ಧ ವಿಮಾನದ ಪೈಲಟ್ ತರಬೇತಿಗೆ ಕರ್ನಾಟಕದ ಕೊಡಗಿನ ಹುಡುಗಿ ಪುಣ್ಯಾ ನಂಜಪ್ಪ ಆಯ್ಕೆಯಾಗಿದ್ದು, ಟ್ರೈನಿ ಪೈಲಟ್ ಆಗಿ ಆರು ತಿಂಗಳುಗಳ ಕಾಲ ತರಬೇತಿ ಪಡೆಯಲಿದ್ದಾರೆ.
ಹೈದರಾಬಾದಿನ ದುಂಡಿಗಲ್ನಲ್ಲಿರುವ ವಾಯುಪಡೆ ಅಕಾಡೆಮಿಯ ಫ್ಲೈಯಿಂಗ್ ಬ್ರಾಂಚ್ನಲ್ಲಿ ಈಗಾಗಲೇ ಒಂದು ವರ್ಷಗಳ ತರಬೇತಿಯನ್ನೂ ಮುಗಿಸಿರುವ ಪುಣ್ಯಾ, ಕೊಡಗಿನ ವಿರಾಜಪೇಟೆಯ ಕೊಳುವಂಡ ನಂಜಪ್ಪ ಮತ್ತು ಅನುರಾಧ ನಂಜಪ್ಪ ದಂಪತಿಗಳ ಪುತ್ರಿಯಾಗಿದ್ದು, ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ.
ಪುಣ್ಯಾ ಅವರು ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ. ಮೈಸೂರಿನ ದಸರಾದಲ್ಲಿ ವಿಮಾನಗಳ ಹಾರಾಟವನ್ನು ಕಣ್ತುಂಬಿಕೊಂಡಿದ್ದ ಅವರಿಗೆ 9ನೇ ತರಗತಿಯಲ್ಲಿರುವಾಗಲೇ ಪೈಲೆಟ್ ಆಗುವ ಗುರಿ ನೆಟ್ಟಿದ್ದರು. ಅದರಂತೆ ಇಂದು ಅವರು ತಮ್ಮ ಕನಸನ್ನು ನನಸಾಗಿಸುವ ಪಯಣದಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಪುಣ್ಯಾ ಹೆತ್ತವರು, ಮಗಳು ಫೈಟಿಂಗ್ ಸ್ಟ್ರೀಮ್ ಗೆ ಮಗಳು ಆಯ್ಕೆಯಾಗಿರುವ ವಿಚಾರ ಸಂತಸ ನೀಡಿದೆ. ಸದ್ಯ ಒಂದು ವರ್ಷದ ತರಬೇತಿಯ ಬಳಿಕ ಸಾಗಾಣೆ, ಕಾರ್ಗೊ, ಫೈಟಿಂಗ್ ಸ್ಟ್ರೀಂಗೆ ಆಕೆಯ ಆಯ್ಕೆ ನಡೆಯಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.