ಕಠ್ಮಂಡು: ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ಅವರ ವಿರುದ್ಧ ಅಸಮಾಧಾನಗಳು ಭುಗಿಲೆದ್ದಿವೆ. ಅವರ ರಾಜೀನಾಮೆಗೆ ಆಡಳಿತರೂಢ ನೇಪಾಳ ಕಮ್ಯೂನಿಷ್ಟ್ ಪಕ್ಷದ ಉನ್ನತ ನಾಯಕರು ಒತ್ತಾಯಿಸುತ್ತಿದ್ದಾರೆ.
ಮಂಗಳವಾರ ನೇಪಾಳದ ಆಡಳಿತ ಪಕ್ಷದ ಪ್ರಬಲ ಸ್ಥಾಯಿ ಸಮಿತಿ ಸಭೆಯು ಬಲುವಾತಾರ್ನ ಪ್ರಧಾನ ಮಂತ್ರಿಯ ಅಧಿಕೃತ ನಿವಾಸದಲ್ಲಿ ನಡೆದಿದೆ, ಮಾಜಿ ಪ್ರಧಾನಿ ಪುಷ್ಪಾ ಕಮಲ್ ದಹಲ್ “ಪ್ರಚಂಡ” ಅವರು ಈ ವೇಳೆ ಕೆಪಿ ಓಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಭಾರತ ಸಂಚು ರೂಪಿಸಿದೆ” ಎಂದು ಹೇಳಿಕೆ ನೀಡಿರುವ ಓಲಿ ವಿರುದ್ಧ ಸಭೆಯಲ್ಲಿ ಅಸಮಾಧಾನಗಳು ಭುಗಿಲೆದ್ದಿವೆ. ಪ್ರಧಾನ ಮಂತ್ರಿಯ ಹೇಳಿಕೆ ರಾಜಕೀಯವಾಗಿ ಸರಿಯಲ್ಲ, ರಾಜತಾಂತ್ರಿಕವಾಗಿ ಸೂಕ್ತವಲ್ಲ ಎಂದು ನಾಯಕರು ಅಭಿಪ್ರಾಯಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
“ಪ್ರಧಾನಮಂತ್ರಿಯ ಇಂತಹ ಹೇಳಿಕೆಯು ನೆರೆಯವರೊಂದಿಗಿನ ನಮ್ಮ ಸಂಬಂಧವನ್ನು ಹಾಳುಮಾಡುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
ನೆರೆಹೊರೆಯ ರಾಷ್ಟ್ರ ಮತ್ತು ತಮ್ಮದೇ ಪಕ್ಷದ ನಾಯಕರ ಮೇಲೆ ಆರೋಪ ಹೊರಿಸುವುದು ಪ್ರಧಾನಮಂತ್ರಿಯವರಿಗೆ ಸೂಕ್ತವಲ್ಲ ಎಂದು ಪಕ್ಷದ ಹಿರಿಯ ಮುಖಂಡರು ಸಭೆಯಲ್ಲಿ ಹೇಳಿದ್ದಾರೆ.
ಇಂತಹ “ರಾಜತಾಂತ್ರಿಕವಾಗಿ ಸೂಕ್ತವಲ್ಲದ ಮತ್ತು ರಾಜಕೀಯೇತರ ಟೀಕೆಗಳನ್ನು” ಮಾಡಿದ ನಂತರ ಪ್ರಧಾನಿ ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಬೇಕು ಎಂದು ಪ್ರಚಂಡ ಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.
ಹಿರಿಯ ನಾಯಕರು ಪ್ರಧಾನಿ ಕೆ.ಪಿ.ಓಲಿ ಅವರನ್ನು ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ನಾಯಕರು ಕೇಳುತ್ತಿರುವುದು ಇದೇ ಮೊದಲಲ್ಲ. ಏಪ್ರಿಲ್ನಲ್ಲಿಯೂ ಕೆ.ಪಿ ಓಲಿಯನ್ನು ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.