ಜೆರುಸಲೇಂ: ತನ್ನ ಮಿಷನರಿ ಅಜೆಂಡಾವನ್ನು ಬಹಿರಂಗಪಡಿಸಲು ವಿಫಲವಾಗಿರುವ ಅಮೆರಿಕಾ ಮೂಲದ “ಗಾಡ್ ಟಿವಿ” ಚಾನೆಲ್ ಅನ್ನು ಇಸ್ರೇಲ್ ನಿಷೇಧಿಸಿದೆ ಎಂದು ವರದಿಗಳು ತಿಳಿಸಿವೆ.
ಇಸ್ರೇಲ್ನ ಕೇಬಲ್ ಮತ್ತು ಸ್ಯಾಟಲೈಟ್ ಬ್ರಾಡ್ಕಾಸ್ಟಿಂಗ್ ಕೌನ್ಸಿಲ್ನ ಅಧ್ಯಕ್ಷ ಆಶರ್ ಬಿಟಾನ್ ಅವರು ಗುರುವಾರ “ಗಾಡ್ ಟಿವಿ”ಗೆ ತನ್ನ ಪ್ರಸಾರವನ್ನು ನಿಲ್ಲಿಸಲು ಏಳು ದಿನಗಳ ಕಾಲಾವಕಾಶವನ್ನು ನೀಡಿದ್ದಾರೆ.
“ಈ ಚಾನೆಲ್ ಕ್ರೈಸ್ಥ ವಿಷಯಗಳ ಮೂಲಕ ಯಹೂದಿಗಳನ್ನು ಓಲೈಸುವ ಕಾರ್ಯ ಮಾಡುತ್ತಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇಸ್ರೇಲ್ನ ಶೆಲನು ನೆಟ್ವರ್ಕ್ ಪ್ರಸಾರ ಮಾಡುತ್ತಿರುವ ಗಾಡ್ ಟಿವಿ, ವಿಶ್ವದ ಅತಿದೊಡ್ಡ ಕ್ರಿಶ್ಚಿಯನ್ ಪ್ರಸಾರ ಜಾಲಗಳಲ್ಲಿ ಒಂದಾಗಿದೆ. ಕನಿಷ್ಠ 200 ದೇಶಗಳಲ್ಲಿ ಉಪಸ್ಥಿತಿ ಹೊಂದಿದೆ ಮತ್ತು ವಿಶ್ವಾದ್ಯಂತ 300 ದಶಲಕ್ಷ ಕುಟುಂಬಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.
ಇವಾಂಜೆಲಿಕಲ್ ಕ್ರಿಶ್ಚಿಯನ್ನರು, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಇರುವವರು ಇಸ್ರೇಲ್ನ ಪ್ರಬಲ ಬೆಂಬಲಿಗರಲ್ಲಿ ಒಬ್ಬರು. ಇಸ್ರೇಲ್ ಸ್ಥಾಪನೆಯು ಯೇಸುವಿನ ಎರಡನೆಯ ಬರುವಿಕೆಗೆ ಅಗತ್ಯವಾದ ಮುನ್ನುಡಿಯಾಗಿದೆ ಎಂದು ಇವರಲ್ಲಿ ಅನೇಕರು ನಂಬುತ್ತಾರೆ, ಯಹೂದಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಇವರನ್ನು ಬಯಸುತ್ತಾರೆ. ಆದರೆ ಅನೇಕ ಯಹೂದಿಗಳು ಇವಾಂಜೆಲಿಕಲ್ ಮತಾಂತರವನ್ನು ಆಕ್ರಮಣಕಾರಿ ಎಂದು ಪರಿಗಣಿಸುತ್ತಾರೆ, ವಿಶೇಷವಾಗಿ ಶತಮಾನಗಳ ಕಿರುಕುಳ ಮತ್ತು ಕ್ರಿಶ್ಚಿಯನ್ ಆಡಳಿತಗಾರರಿಂದ ಬಲವಂತವಾಗಿ ಮತಾಂತರಗೊಂಡ ಪರಂಪರೆಯನ್ನು ಇವರು ಹೊಂದಿದ್ದಾರೆ.
ಇಸ್ರೇಲಿ ಸಂವಿಧಾನದಲ್ಲಿ ಧರ್ಮದ ಸ್ವಾತಂತ್ರ್ಯವನ್ನು ಪ್ರತಿಪಾದಿಸಲಾಗಿದೆ. ಆದರೆ ಅಲ್ಲಿ, ಮಿಷನರಿ ಚಟುವಟಿಕೆಗಳು ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸದೇ ಇದ್ದಾಗ ಮತ್ತು ಮತಾಂತರ ಆರ್ಥಿಕ ದಬ್ಬಾಳಿಕೆಯನ್ನು ಒಳಗೊಳ್ಳದೇ ಇದ್ದಾಗ ಮಾತ್ರ ಅಲ್ಲಿ ಮತಾಂತರವನ್ನು ಅನುಮತಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.