ನವದೆಹಲಿ: ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ತಿಂಗಳಿಗೆ 50 ಲಕ್ಷ ಅಗತ್ಯ ಪಿಪಿಇ ಕಿಟ್ಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆತ್ಮನಿರ್ಭರ ಭಾರತದ ನೆಲೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದ್ದು, ಆ ಮೂಲಕ ಜಗತ್ತಿನ ಆರೋಗ್ಯ ರಕ್ಷಣಾ ಕವಚಗಳ ಅಗತ್ಯತೆಯನ್ನು ಪೂರೈಸುವಲ್ಲಿ ಭಾರತ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ ಈಗಾಗಲೇ ಪಿಪಿಇ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ.
ವಾಣಿಜ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಅರ್ಹ ಅರ್ಜಿದಾರ ರಾಷ್ಟ್ರಗಳಿಗೆ 50 ಲಕ್ಷ ಪಿಪಿಇ ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ, ಈ ಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲಿ ನಾವು ಕೇವಲ ಭಾರತವನ್ನಷ್ಟೇ ಕಾಪಾಡಿಕೊಳ್ಳುವುದಲ್ಲ. ಬದಲಾಗಿ ಇಡೀ ವಿಶ್ವಕ್ಕೆ ನೆರವು ನೀಡುವ ಮೂಲಕ ವಿಶ್ವ ನಾಯಕನ ಸ್ಥಾನಕ್ಕೇರಬೇಕಿದ್ದು, ಅದಕ್ಕಾಗಿ ಇತರ ರಾಷ್ಟ್ರಗಳಿಗೆ ನೆರವಿನ ಹಸ್ತ ಚಾಚಬೇಕಾಗಿದೆ ಎಂದೂ ತಿಳಿಸಿದ್ದಾರೆ.
ಅಗತ್ಯ ಪಿಪಿಇ ಕಿಟ್ಗಳನ್ನು ಒದಗಿಸುವಂತೆ ಅಮೆರಿಕಾ, ಕೆನಡಾ, ಯೂರೋಪ್ ರಾಷ್ಟ್ರಗಳು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಹ ಭಾರತೀಯ ಪಿಪಿಇ ತಯಾರಿಕಾ ಸಂಸ್ಥೆಗಳಿಗೆ ಕೋರಿಕೊಂಡಿರುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂಟರ್ನ್ಯಾಷನಲ್ ಎಂಎಸ್ಎಂಇ ದಿನದಂದು ಮಾಹಿತಿ ನೀಡಿದ್ದಾರೆ.
ಇನ್ನು ಮುಂದಿನ 5 ವರ್ಷಗಳಲ್ಲಿಯೇ 60 ಬಿಲಿಯನ್ ಡಾಲರ್ಗೂ ಹೆಚ್ಚಿನ ಪಿಪಿಇ ಕಿಟ್ಗಳ ಅಗತ್ಯತೆ ಜಗತ್ತಿಗೆ ತಲೆದೋರಲಿದೆ ಎಂದು ಎಇಪಿಸಿ ವರದಿ ನೀಡಿದ್ದು, ಈ ನಿಟ್ಟಿನಲ್ಲಿಯೂ ಭಾರತದ ಆತ್ಮನಿರ್ಭರ ಯೋಜನೆ ಜಗತ್ತಿನ ಅಗತ್ಯತೆಗಳನ್ನು ಪೂರೈಸುವಲ್ಲಿ ಹೆಚ್ಚು ಮುಖ್ಯವಾಗಲಿದೆ. ಈಗಾಗಲೇ ಖಾಸಗಿ ಸಂಸ್ಥೆಗಳ ಸಹಕಾರವನ್ನು ತೆಗೆದುಕೊಂಡಿರುವ ಮೋದಿ ಸರ್ಕಾರ ಪಿಪಿಇ ಕಿಟ್ ತಯಾರಿಕೆಯಲ್ಲಿ ಸಾಧನೆ ಮೆರೆದಿದೆ. ಸದ್ಯ ಭಾರತ ದಿನಕ್ಕೆ 6 ಲಕ್ಷದಷ್ಟು ಪಿಪಿಪಿಇಗಳ ಉತ್ಪಾದನೆ ಮಾಡುತ್ತಿದ್ದು, ವಿದೇಶಗಳಿಗೂ ರವಾನೆ ಮಾಡುತ್ತಿದೆ ಎಂದು ವರದಿಗಳು ಮಾಹಿತಿ ನೀಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.