ವಾಷಿಂಗ್ಟನ್: ಪೂರ್ವ ಲಡಾಕ್ ನ ಗಲ್ವಾನ್ ನಲ್ಲಿ ಇತ್ತೀಚೆಗೆ ಚೀನಾ ಮತ್ತು ಭಾರತದ ನಡುವಿನ ಸಂಘರ್ಷ ಚೀನಾದ ಮೋಸದ ಭಾಗವಾಗಿದೆ. ನೆರೆಯ ದೇಶಗಳನ್ನು ಸೈನ್ಯದ ಮೂಲಕ ಕೆರಳಿಸುವ ಚೀನಾದ ದುರುದ್ದೇಶದ ಕೃತ್ಯವನ್ನು ಅಮೆರಿಕಾ ಸಹಿಸಲಾರದು ಎಂದು ಅಮೆರಿಕಾದ ಸಂಸದ ಟೆಡ್ ಯೊಹೊ ಅವರು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
ಜಗತ್ತು ಕೊರೋನಾದಿಂದ ಸಂಕಷ್ಟ ಅನುಭವಿಸುತ್ತಿದೆ. ಈ ಮಾರಣಾಂತಿಕ ವೈರಸ್ ಸಹ ಚೀನಾದ್ದು. ಈ ಗೊಂದಲಗಳನ್ನು ಮುಚ್ಚಿ ಹಾಕುವ ಸಲುವಾಗಿ ಚೀನಾ ಇಂತಹ ಕುಕೃತ್ಯಗಳಲ್ಲಿ ತೊಡಗಿಸಿದೆ. ಚೀನಾದ ಕಮ್ಯುನಿಸ್ಟ್ ಪಕ್ಷದ ಕುತಂತ್ರದಂತೆ ಹಾಂಕಾಂಗ್, ವಿಯೆಟ್ನಾಂ, ತೈವಾನ್ ಗಳ ವಿರುದ್ಧವೂ ಚೀನಾ ಸೈನ್ಯವನ್ನು ಕಳುಹಿಸಿ ಯುದ್ಧಕ್ಕೆ ಪ್ರಚೋದನೆ ನೀಡಲಾರಂಭಿಸಿದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ.
ಇಂತಹ ಅಪ್ರಚೋದಿತ ದಾಳಿ ಮತ್ತು ಪೂರ್ವ ಯೋಜಿತ ಕುಕೃತ್ಯಗಳಿಗೆ ಅಮೆರಿಕಾ ಬೆಂಬಲ ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ಇಡೀ ಜಗತ್ತು ಒಟ್ಟಾಗಿ ಚೀನಾದ ನರಿ ಬುದ್ಧಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದೂ ಅವರು ಟ್ವೀಟ್ ಮಾಡಿದ್ದಾರೆ.
ಇನ್ನು ಚೀನಾ-ಭಾರತ ಗಡಿ ಸಮಸ್ಯೆ ಯ ಬಗ್ಗೆ ಮಾತನಾಡಿರುವ ಭಾರತೀಯ ಸಃಜಾತ ಅಮಿ ಬೆರಾ(ದೀರ್ಘ ಕಾಲದ ವರೆಗೆ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್ ಸದಸ್ಯರಾಗಿದ್ದರು), ಚೀನಾ ಈ ಸಮಸ್ಯೆಯನ್ನು ರಾಜತಾಂತ್ರಿಕ ನಡೆಗಳ ಮೂಲಕ ಶಮನ ಗೊಳಿಸಲು ಪ್ರಯತ್ನ ನಡೆಸಬೇಕು. ಅಲ್ಲದೆ ಗಡಿಯಲ್ಲಿ ಅಪ್ರಚೋದಿತ ಗಲಭೆ ಮೂಲಕ ಉದ್ವಿಗ್ನ ಸ್ಥಿತಿ ನಿರ್ಮಾಣ ಮಾಡಿ ವಿನಾ ಕಾರಣ ಭಾರತವನ್ನು ಕೆಣಕುವ ಮೂಲಕ ಒತ್ತಡ ಹೇರುವುದಲ್ಲ ಎಂದೂ ಕಿವಿಮಾತು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.