ನವದೆಹಲಿ: ಅಮೆರಿಕಾದಲ್ಲಿ ಇತ್ತೀಚಿಗೆ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಪ್ರತಿಮೆಗಳನ್ನು ಧ್ವಂಸ ಮಾಡುವ ಕೃತ್ಯಗಳನ್ನು ಎಸಗಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ಪ್ರತಿಭೆಗಳನ್ನು ಧ್ವಂಸ ಮಾಡುವವರಿಗೆ 10 ವರ್ಷಗಳ ದೀರ್ಘಾವಧಿ ಸೆರೆವಾಸ ವಿಧಿಸುವ ಕಾನೂನು ತರಲಾಗಿದೆ.
ಅಮೆರಿಕಾದ ಸ್ಮಾರಕಗಳನ್ನು ರಕ್ಷಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
“ಅಮೇರಿಕನ್ ಸ್ಮಾರಕಗಳು, ಶಿಲ್ಪಕಲೆ ಮತ್ತು ಪ್ರತಿಮೆಗಳನ್ನು ರಕ್ಷಿಸುವ ಮತ್ತು ಇತ್ತೀಚಿನ ಹಿಂಸಾಚಾರವನ್ನು ಪರಿಣಾಮಕಾರಿಯಾಗಿ ಎದುರಿಸುವ ಅತ್ಯಂತ ಬಲವಾದ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುವ ಭಾಗ್ಯವನ್ನು ನಾನು ಹೊಂದಿದ್ದೇನೆ” ಎಂದು ಟ್ರಂಪ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
“ನಮ್ಮ ಶ್ರೇಷ್ಠ ದೇಶದ ವಿರುದ್ಧದ ಕಾನೂನುಬಾಹಿರ ಕೃತ್ಯಗಳಿಗೆ ದೀರ್ಘ ಜೈಲು ಶಿಕ್ಷೆಯಾಗಲಿದೆ” ಎಂದು ಟ್ರಂಪ್ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಸಾರ್ವಜನಿಕ ಸ್ಮಾರಕಗಳನ್ನು ಅಪವಿತ್ರಗೊಳಿಸುವುದು, ಸರ್ಕಾರಿ ಆಸ್ತಿಯನ್ನು ವಿಧ್ವಂಸಕಗೊಳಿಸುವ ಕೃತ್ಯ ಮತ್ತು ಇತ್ತೀಚಿನ ಹಿಂಸಾಚಾರಗಳನ್ನು ನಿಷೇಧಿಸುವ ಕಾನೂನುಗಳನ್ನು ಈ ಆದೇಶವು ಜಾರಿಗೊಳಿಸುತ್ತದೆ. ಸಾರ್ವಜನಿಕ ಸ್ಮಾರಕಗಳನ್ನು ರಕ್ಷಿಸುವಲ್ಲಿ ವಿಫಲವಾಗಿರುವ ಸ್ಥಳೀಯ ಸರ್ಕಾರಗಳಿಗೆ ಫೆಡರಲ್ ಬೆಂಬಲವನ್ನು ತಡೆಹಿಡಿಯುತ್ತದೆ ಮತ್ತು ನ್ಯಾಯವ್ಯಾಪ್ತಿಗಳಿಗೆ ಫೆಡರಲ್ ಅನುದಾನವನ್ನು ಹಿಂಪಡೆಯುತ್ತದೆ ಎಂದು ಹೇಳಲಾಗಿದೆ.
ಫೆಡರಲ್ ಪ್ರತಿಮೆಗಳ ರಕ್ಷಣೆಗೆ ಇದು ನೆರವು ನೀಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಶ್ವೇತಭವನದ ಬಳಿಯ ಮಾಜಿ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ ಅವರ ಪ್ರತಿಮೆಯನ್ನು ಕಿತ್ತುಹಾಕುವ ಪ್ರತಿಭಟನಾಕಾರರ ಪ್ರಯತ್ನವನ್ನು ಪೊಲೀಸರು ತಡೆದ ನಂತರ ಒಂದು ರಾತ್ರಿ ಇಂತಹ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುವುದಾಗಿ ಟ್ರಂಪ್ ಮಂಗಳವಾರ ಘೋಷಿಸಿದ್ದರು.
ಸ್ಮಾರಕಗಳು ಮತ್ತು ಮೂಲಸೌಕರ್ಯಗಳನ್ನು ಕಾಪಾಡಲು ವಾಷಿಂಗ್ಟನ್ ಡಿಸಿಯಲ್ಲಿ 400 ರಾಷ್ಟ್ರೀಯ ಗಾರ್ಡ್ ಪಡೆಗಳನ್ನು ಸಕ್ರಿಯಗೊಳಿಸಲಾಗಿದೆ ಮತ್ತು ಯುಎಸ್ ರಾಜಧಾನಿಯಲ್ಲಿರುವ ಏಕೈಕ ಕಾನ್ಫಿಡರೇಟ್ ಪ್ರತಿಮೆಯನ್ನು ಜೂನ್ 19 ರಂದು ಕಿತ್ತುಹಾಕಿದ ನಂತರ ಅದನ್ನು ಪುನಃಸ್ಥಾಪಿಸಲು ಟ್ರಂಪ್ ವೈಯಕ್ತಿಕವಾಗಿ ಆಂತರಿಕ ಕಾರ್ಯದರ್ಶಿ ಡೇವಿಡ್ ಬರ್ನ್ಹಾರ್ಡ್ಗೆ ಸೂಚನೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.