ಇಸ್ಲಾಮಾಬಾದ್: ಪಾಕಿಸ್ಥಾನ ಭಯೋತ್ಪಾದಕರ ಸ್ವರ್ಗ ಎಂಬುದು ಇಡೀ ವಿಶ್ವಕ್ಕೆ ತಿಳಿದಿರುವ ವಿಷಯ. ಉಗ್ರರನ್ನು ಪೋಷಣೆ ಮಾಡುತ್ತಿರುವ ಆ ರಾಷ್ಟ್ರದ ವಿರುದ್ಧ ಎಷ್ಟು ಬಾರಿ ಛೀಮಾರಿ ಹಾಕಿದರೂ ಅದು ಮಾತ್ರ ಬುದ್ಧಿಯನ್ನೇ ಕಲಿತಿಲ್ಲ. ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ್ದ ಉಗ್ರ ಒಸಾಮ ಬಿನ್ ಲಾಡೆನ್ ಅನ್ನು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಸಂಸತ್ತಿನಲ್ಲಿ ಹುತಾತ್ಮ ಎನ್ನುವ ಮೂಲಕ ತಮ್ಮ ಹಾಗೂ ತನ್ನ ದೇಶದ ಚರಿತ್ರೆ ಎಂತಹದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ತಮ್ಮ ದೇಶದ ಸಂಸತ್ತಿನಲ್ಲಿ ನಿಂತುಕೊಂಡು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅನ್ನು ಹುತಾತ್ಮ ಎಂದು ಕರೆದಿರುವ ಇಮ್ರಾನ್ ಖಾನ್ ಅವರ ವಿಡಿಯೋ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಪಾಕಿಸ್ಥಾನ ವಿಶ್ವದ ಅಗ್ರಗಣ್ಯ ಭಯೋತ್ಪಾದಕ ರಾಷ್ಟ್ರ ಎಂಬುದು ಇಮ್ರಾನ್ ಖಾನ್ ಅವರ ಮಾತುಗಳಿಂದ ಸಾಬೀತಾಗುತ್ತದೆ.
“ಅಮೆರಿಕ ಪಾಕಿಸ್ಥಾನದ ಒಳಗೆ ಬಂದಿತು ಮತ್ತು ಒಸಾಮಾ ಅವರನ್ನು ಕೊಂದು ಹುತಾತ್ಮರನ್ನಾಗಿ ಮಾಡಿತು. ಇದರ ಬಳಿಕ ಎಲ್ಲಾ ದೇಶಗಳು ನಮಗೆ ಶಾಪ ಹಾಕಿದವು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನವು ಹಲವು ವರ್ಷಗಳವರೆಗೆ ಅವಮಾನವನ್ನು ಎದುರಿಸಬೇಕಾಯಿತು” ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯಲ್ಲಿ ಇದುವರೆಗೆ ಪಾಕಿಸ್ಥಾನದ 70 ಸಾವಿರ ಜನರು ಹತರಾಗಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ.
ಒಸಮಾನನ್ನು 2011ರ ಮೇ 2ರಂದು ಪಾಕಿಸ್ಥಾನದ ಅಬೋಟಾಬಾದ್ನಲ್ಲಿ ಅಮೆರಿಕದ ನೌಕದಳದ ಸೇರ್ಪಡೆ ರಹಸ್ಯ ಕಾರ್ಯಾಚರಣೆ ನಡೆಸಿ ಕೊಂದು ಹಾಕಿತ್ತು. ಅಂತರಾಷ್ಟ್ರೀಯ ಭಯೋತ್ಪಾದಕನಿಗೆ ನೆಲ ಕಲ್ಪಿಸಿಕೊಟ್ಟಿದ್ದ ಪಾಕಿಸ್ಥಾನ ಈ ಸಂದರ್ಭದಲ್ಲಿ ದೊಡ್ಡ ಅವಮಾನವನ್ನು ಎದುರಿಸಬೇಕಾಗಿ ಬಂತು. ಭಯೋತ್ಪಾದಕರಿಗೆ ನೆಲೆ ಕಲ್ಪಿಸುವ ಪಾಕಿಸ್ತಾನದ ನೀಚ ಮುಖ ಕೂಡ ಈ ಸಂದರ್ಭದಲ್ಲಿ ಬಯಲಾಗಿತ್ತು.
ಇದೀಗ ಇಮ್ರಾನ್ ಖಾನ್ ಅವರು ಉಗ್ರ ಒಸಾಮನನ್ನು ಹುತಾತ್ಮ ಎನ್ನುವ ಮೂಲಕ ಮತ್ತೊಮ್ಮೆ ತನ್ನ ದೇಶದ ನಿಜಮುಖ ಬಯಲು ಮಾಡಿದ್ದಾರೆ.
PM Pakistan Imran Khan considers Osama bin Laden a martyr. pic.twitter.com/tax0t3V5wg
— Naila Inayat नायला इनायत (@nailainayat) June 25, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.