ಲಂಡನ್: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ 50 ಮಹಿಳೆಯರ ಪಟ್ಟಿಯನ್ನು ಬ್ರಿಟನ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ ಮೂಲದ ಐವರು ಮಹಿಳೆಯರು ಕೂಡ ಸ್ಥಾನ ಪಡೆದಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ.
ಬ್ರಿಟನ್ ಅಣುಶಕ್ತಿ ಪ್ರಾಧಿಕಾರದ ಚಿತ್ರಾ ಶ್ರೀನಿವಾಸ್ ಅವರು ಪಟ್ಟಿಯಲ್ಲಿ ಸ್ಥಾನ ಪಡೆದ ಐವರು ಭಾರತೀಯ ಸಂಜಾತೆಯರಲ್ಲಿ ಒಬ್ಬರು. ಸಾರಿಗೆ ಎಂಜಿನಿಯರ್ ರೀತು ಗರ್ಗ್, ಭೂಕಂಪದ ಕುರಿತ ಅಧ್ಯಯನ ಕೈಗೊಂಡ ಬರ್ನಾಲಿ ಘೋಷ್, ಹವಾಮಾನ ಬದಲಾವಣೆಯ ಕುರಿತಂತೆ ತಜ್ಞರಾಗಿರುವ ಎಂಜಿನಿಯರ್ ಅನುಷಾ ಶಾ, ಹಿರಿಯ ಎಂಜಿನಿಯರ್ ಕುಸೂಮಾ ತ್ರಿಖಾ ಅವರೂ ಈ 50 ಎಂಜಿನಿಯರಿಂಗ್ ಸಾಧಕಿ ಮಹಿಳೆಯರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಉದ್ಯಮ ವಲಯದ ತಜ್ಞರು ಈ ಮಹಿಳಾ ಸಾಧಕಿಯರ ಪಟ್ಟಿಯನ್ನು ಆಯ್ಕೆ ಮಾಡಿದ್ದಾರೆ. ಮಹಿಳಾ ಎಂಜಿನಿಯರಿಂಗ್ ದಿನಾಚರಣೆಯ ಅಂಗವಾಗಿ ಪ್ರಶಸ್ತಿ ನೀಡಲು ಈ ಸಾಧಕಿಯರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪ್ರಶಸ್ತಿಗಳನ್ನು ಪ್ರದಾನಿಸಲಾಗಿದೆ.
ಐದನೇ ವರ್ಷದ ಪ್ರಶಸ್ತಿಗಳು ಇದಾಗಿದ್ದು, ಎಂಜಿನಿಯರಿಂಗ್ ಒಳಗಿನ ಸ್ತ್ರೀ ಪ್ರತಿಭೆಗಳನ್ನು ಗುರುತಿಸುವುದು ಇದರ ಉದ್ದೇಶವಾಗಿದೆ. ಇದು ಇಂಟರ್ನ್ಯಾಷನಲ್ ವುಮೆನ್ ಇನ್ ಎಂಜಿನಿಯರಿಂಗ್ ದಿನಾಚರಣೆಯೊಂದಿಗೆ ಸಂಯೋಜಿಸಲ್ಪಟ್ಟ ವಾರ್ಷಿಕ ಆಚರಣೆಯಾಗಿದ್ದು, ಇದು ಮಹಿಳಾ ಎಂಜಿನಿಯರಿಂಗ್ ಸೊಸೈಟಿಯ ಸಮನ್ವಯದೊಂದಿಗೆ ಜೂನ್ 23 ರಂದು ಪ್ರತಿ ವರ್ಷ ನಡೆಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.