ನವದೆಹಲಿ: ಚೀನಾದೊಂದಿಗೆ ನಡೆಯುತ್ತಿರುವ ಗಡಿ ಬಿಕ್ಕಟ್ಟು ಮತ್ತು ರಾಜತಾಂತ್ರಿಕ ಉದ್ವಿಗ್ನತೆಗಳ ನಡುವೆ, ಕೇಂದ್ರ ಸರ್ಕಾರವು ದೇಶೀಯ ಬೆಲೆಗಳಿಗೆ ಹೋಲಿಸಿದರೆ ಕಡಿಮೆ ಬೆಲೆ ಇರುವ ಮತ್ತು ತೆರಿಗೆ ಅನಾನುಕೂಲತೆಯನ್ನು ಸೃಷ್ಟಿಸುವ ಅಗ್ಗದ ಆಮದಿನ ಉತ್ಪನ್ನವಾರು ವಿವರಗಳನ್ನು ಕೋರಿದೆ.
ಈ ಕ್ರಮವು ವಿಶೇಷವಾಗಿ ಚೀನಾದಿಂದ ಭಾರತಕ್ಕೆ ಬರುತ್ತಿರುವ ಕಡಿಮೆ ಗುಣಮಟ್ಟದ ಸಾಗಣೆಯನ್ನು ತಡೆಯುವ ಮತ್ತು ದೇಶದಲ್ಲಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.
ಆತ್ಮನಿರ್ಭರ ಭಾರತವನ್ನು ಉತ್ತೇಜಿಸುವ ಮತ್ತು ಚೀನಾದ ಮೇಲಿನ ಆಮದು ಅವಲಂಬನೆಯನ್ನು ಕಡಿತಗೊಳಿಸುವ ಮಾರ್ಗಗಳನ್ನು ಚರ್ಚಿಸಲು ಇತ್ತೀಚೆಗೆ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ (ಪಿಎಂಒ) ಉನ್ನತ ಮಟ್ಟದ ಸಭೆ ನಡೆಸಿತ್ತು ಎಂದು ವರದಿಗಳು ಹೇಳಿವೆ.
ಭಾರತದ ಆಮದಿನಲ್ಲಿ ಶೇ 14ರಷ್ಟು ಚೀನಾವನ್ನು ಅವಲಂಬಿಸಿದೆ, ಇವುಗಳು ಸೆಲ್ ಫೋನ್, ಟೆಲಿಕಾಂ, ಫಾರ್ಮಾ ಪದಾರ್ಥಗಳು ಪ್ರಮುಖವಾಗಿದೆ.
ವರದಿಯ ಪ್ರಕಾರ, ಚೀನಾದಿಂದ ಆಮದು ಮಾಡಿಕೊಳ್ಳುವ ಸರಕು ಮತ್ತು ಕಚ್ಚಾ ವಸ್ತುಗಳ ಕುರಿತು ಸಲಹೆಗಳು ಮತ್ತು ಪ್ರತಿಕ್ರಿಯೆಗಳನ್ನು ಕಳುಹಿಸುವಂತೆ ಪಿಎಂಒ ಕೈಗಾರಿಕೆಗಳನ್ನು ಕೇಳಿದೆ. ಈ ಪಟ್ಟಿಯಲ್ಲಿ ಕೈಗಡಿಯಾರಗಳು, ಗಾಜಿನ ವಸ್ತುಗಳು, ಕೂದಲಿನ ಶ್ಯಾಂಪೂಗಳು, ಕಣ್ಣು ಮತ್ತು ತುಟಿ ಮೇಕಪ್ಗೆ ಬಳಸುವ ಕಚ್ಚಾ ವಸ್ತುಗಳು ಮತ್ತು ಪದಾರ್ಥಗಳು, ಬಣ್ಣಗಳು ಮತ್ತು ವಾರ್ನಿಷ್ಗಳು, ತಂಬಾಕು ವಸ್ತುಗಳು, ಗೋಡೆ ಗಡಿಯಾರಗಳು, ಫೇಸ್ ಪೌಡರ್ ಮತ್ತು ಇನ್ನೂ ಅನೇಕವು ಸೇರಿವೆ.
ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆ ಮತ್ತು ಚೀನಾದ ಸರಕುಗಳನ್ನು ಬಹಿಷ್ಕರಿಸುವ ಬೇಡಿಕೆಗಳ ನಡುವೆ ಚೀನಾದಿಂದ ಆಮದು ಕಡಿಮೆ ಮಾಡುವ ಕೇಂದ್ರದ ನಿರ್ಧಾರವು ಮಹತ್ವವನ್ನು ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.