ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾ ಸೈನಿಕರ ಹುತಾತ್ಮತೆಯ ಬಳಿಕ ಚೀನಾ ವಿರೋಧಿ ಭಾವನೆ ಭಾರತದಲ್ಲಿ ಹೆಚ್ಚಾಗುತ್ತಿದೆ, ಈ ಹಿನ್ನೆಯಲ್ಲಿ ಭಾರತೀಯ ಸ್ಮಾರ್ಟ್ಫೋನ್ ಕಂಪನಿಗಳು ಮಾರುಕಟ್ಟೆಗೆ ಪುನರಾಗಮನ ಮಾಡಲು ಯೋಜಿಸುತ್ತಿವೆ ಎಂದು ವರದಿಗಳು ತಿಳಿಸಿವೆ.
ಸ್ವದೇಶಿ ಮೊಬೈಲ್ ಫೋನ್ ತಯಾರಕರಾದ ಮೈಕ್ರೋಮ್ಯಾಕ್ಸ್, ಕಾರ್ಬನ್ ಮತ್ತು ಲಾವಾ ಕಳೆದ ನಾಲ್ಕು ವರ್ಷಗಳಲ್ಲಿ ಚೀನೀ ಬ್ರಾಂಡ್ಗಳಿಂದಾಗಿ ಮಾರುಕಟ್ಟೆಯನ್ನು ಕಳೆದುಕೊಂಡಿದ್ದವು. ಇದೀಗ ಕಳೆದುಕೊಂಡ ಮಾರುಕಟ್ಟೆಯನ್ನು ಪುನಃ ಪಡೆದುಕೊಳ್ಳುವ ಉದ್ದೇಶದಿಂದ 10,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳನ್ನು ಮರುಪ್ರಾರಂಭಿಸಲು ಸಜ್ಜಾಗುತ್ತಿವೆ. ದೇಶದಲ್ಲಿ ಹೆಚ್ಚಾಗುತ್ತಿರುವ ಚೀನಾ ವಿರೋಧಿ ಭಾವನೆಗಳೇ ಇದಕ್ಕೆ ಕಾರಣ.
ಕಾರ್ಬನ್ ಮತ್ತು ಲಾವಾ ಜುಲೈ-ಆಗಸ್ಟ್ನಲ್ಲಿ ರೂ.4000ದಿಂದ 7,000 ರೂ ಬೆಲೆಯ 3-4 ಮಾಡೆಲ್ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಿದ್ದರೆ, ಮೈಕ್ರೋಮ್ಯಾಕ್ಸ್ ರೂ.7,000 ರಿಂದ 15,000 ರೂ ವಿಭಾಗದಲ್ಲಿ ಪೂರ್ಣ ಪ್ರಮಾಣದ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಿದೆ.
ಪ್ರಸ್ತುತ, ಭಾರತೀಯ ಬ್ರ್ಯಾಂಡ್ಗಳು ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಕೇವಲ 1 ಶೇಕಡಾ ಪಾಲನ್ನು ಹೊಂದಿದ್ದು, ಚೀನಾದ ಬ್ರಾಂಡ್ಗಳ ಶೇ.81ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.
ಚೀನಾ ವಿರೋಧಿ ಭಾವನೆಗಳು ದೇಶದಲ್ಲಿವೆ ಎಂದು ಒಪ್ಪಿಕೊಂಡ ಕಾರ್ಬನ್ ಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಪರ್ದೀಪ್ ಜೈನ್, ಆಂತರಿಕ ಸಂಚಯಗಳಿಂದ ಸ್ಮಾರ್ಟ್ಫೋನ್ಗಳಿಗೆ ಮರು ಪ್ರವೇಶಿಸಲು ಕಂಪನಿಯು ಹಣ ನೀಡಲಿದೆ ಎಂದು ಹೇಳಿದರು.
ಚೀನಾ ಅಲೆಯಿಂದ ಕೊಚ್ಚಿ ಹೋದ ಈ ಕಂಪನಿಗಳು ಮತ್ತೆ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಲು ದೃಢ ಪ್ರಯತ್ನವನ್ನು ನಡೆಸುವ ವಿಶ್ವಾಸದಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.