ಕಟೀಲು: ಕೊರೋನಾ ಲಾಕ್ಡೌನ್ ನಂತರದಲ್ಲಿ ದಕ್ಷಿಣ ಕನ್ನಡದ ಕಟೀಲು ದುರ್ಗಾಪರಮೇಶ್ವರಿ ದೇಗುಲ ಮತ್ತೆ ಸೇವೆ ಆರಂಭಿಸಿದ್ದು, ಭಾನುವಾರದಿಂದ ತೊಡಗಿದಂತೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಇ-ಟಿಕೆಟ್ ನೀಡಲಾರಂಭಿಸಿದೆ.
ಇದಕ್ಕಾಗಿ ದೇವಾಲಯ ವಿಶೇಷ ಸಾಫ್ಟ್ವೇರ್ ಒಂದನ್ನು ಬಳಕೆ ಮಾಡಲಾರಂಭಿಸಿದ್ದು, ಬೆಳಗ್ಗೆ 7.30 ರಿಂದ ತೊಡಗಿದಂತೆ ರಾತ್ರಿ 7.30 ರ ವರೆಗೆ ದೇವಾಲಯದಲ್ಲಿ ದೇವಿ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದ್ದು, ಪ್ರತಿ 15 ನಿಮಿಷಗಳಿಗೆ 60 ಜನರಂತೆ ದೇವಾಲಯದೊಳಕ್ಕೆ ಹೋಗುವ, ದರ್ಶನ ಪಡೆಯಲು ಅವಕಾಶವನ್ನು ನೀಡಲಾಗುತ್ತಿದೆ. 10 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಜಾಸ್ತಿ ವಯಸ್ಸಿನವರಿಗೆ ದೇಗುಲದೊಳಗೆ ಪ್ರವೇಶವಿಲ್ಲ.
ದೇವಾಲಯಕ್ಕೆ ಆಗಮಿಸುವ ಹೊರ ಜಿಲ್ಲೆಯ ಭಕ್ತರಿಗೆ ಇ-ಟಿಕೆಟ್ ಅನ್ನು ಕಡ್ಡಾಯ ಮಾಡಲಾಗಿದೆ. ದೇವಾಲಯ ತೆರೆದ ದಿನದಂದು ಈವರೆಗೆ ಸುಮಾರು 2500 ಮಂದಿ ಭಕ್ತರು ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇ-ಟಿಕೆಟ್ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ ಎಂದು ದೇಗುಲಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಥರ್ಮಲ್ ಸ್ಕ್ಯಾನಿಂಗ್, ಸ್ಯಾನಟೈಸೇಶನ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಲಾಗುತ್ತದೆ. ಜೊತೆಗೆ ದೇವಾಲಯದಲ್ಲಿ ಕೇವಲ ದೇವರ ದರ್ಶನಕ್ಕೆ ಮಾತ್ರವೇ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಸೇವೆ ಮಾಡಲಾಗುವುದಿಲ್ಲ ಎಂಬುದನ್ನು ಆಡಳಿತ ಸಮಿತಿ ಸ್ಪಷ್ಟ ಪಡಿಸಿದೆ. ಸರ್ಕಾರ ಸೇವೆಗಳ ಆರಂಭಕ್ಕೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದ ನಂತರ ಸೇವೆಗಳನ್ನು ಆರಂಭಿಸುವುದಾಗಿಯೂ ಆಡಳಿತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಲಿಂಕ್ ಮೂಲಕ ಇ-ಟಿಕೆಟ್ ಪಡೆಯಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.