ವಾಷಿಂಗ್ಟನ್: ಅಮೆರಿಕಾದ ಡೆಲ್ವೇರ್ ಪ್ರದೇಶದಲ್ಲಿ ಅತೀ ದೊಡ್ಡ 25 ಅಡಿ ಎತ್ತರದ ಹನುಮಾನ್ ವಿಗ್ರಹವನ್ನು ನಿರ್ಮಾಣ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಇಡೀ ಅಮೆರಿಕಾದಲ್ಲಿಯೇ ಈ ವಿಗ್ರಹ ಅತ್ಯಂತ ಎತ್ತರದ ಹಿಂದೂ ದೇವರ ವಿಗ್ರಹವಾಗಿದೆ. ಇದನ್ನು ಕಪ್ಪು ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗಿದ್ದು, ಈ ನಯನ ಮನೋಹರ ಮೂರ್ತಿಯ ಕೆತ್ತನೆಗೆ ಶಿಲ್ಪಿಗಳು ಸಂಪೂರ್ಣ ಒಂದು ವರ್ಷಗಳ ಅವಧಿಯನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಅಮೆರಿಕಾದ ಅಧಿಕೃತ ಮೂಲಗಳು ಮಾಹಿತಿ ನೀಡಿವೆ.
ಸಾಂಪ್ರಾದಾಯಿಕ ಶೈಲಿಯಲ್ಲಿಯೇ ಈ ವಿಗ್ರಹದ ಕೆತ್ತನೆ ಕಾರ್ಯಗಳು ನಡೆದಿದ್ದು, ಬಳಿಕ ಈ ಮೂರ್ತಿಯನ್ನು ಸಂಬಂಧಿಸಿದ ದೇವಾಲಯದ ಆಡಳಿತ ಮಂಡಳಿಯ ಕೈಗೆ ಒಪ್ಪಿಸಲಾಗಿದೆ. ಈ ಮೂರ್ತಿಗೆ ಜೀವಕಳೆ ನೀಡುವ, ಇದನ್ನು ಲೋಕಾರ್ಪಣೆ ಮಾಡುವ ದೃಷ್ಟಿಯಿಂದ ದೇವಾಲಯದ ಅರ್ಚಕ ವರ್ಗ ಹತ್ತು ದಿನಗಳ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿರುವುದಾಗಿಯೂ ತಿಳಿದುಬಂದಿದೆ.
ಯಜ್ಞಯಾಗಾದಿಗಳ ಮೂಲಕ, ಮತ್ತಿತರ ಧಾರ್ಮಿಕ ಆಚರಣೆಗಳ ಮೂಲಕ ಈ ಕೆತ್ತನೆಯನ್ನು ಅನಾವರಣಗೊಳಿಸಲಾಗಿದೆ ಎಂದು ಹಾಕೆಸ್ಸಿನ್ ನ ಹಿಂದೂ ದೇವಾಲಯಗಳ ಮಂಡಳಿಯ ಒಕ್ಕೂಟದ ಅಧ್ಯಕ್ಷ ಪಟಿಬಂಧ ಶರ್ಮಾ ಮಾಹಿತಿ ನೀಡಿದ್ದಾರೆ.
ಮೂರ್ತಿಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಯಂತ್ರ ಪ್ರತಿಷ್ಠೆ, ಪ್ರಾಣ ಪ್ರತಿಷ್ಟೆ ಯಂತಹ ಕಾರ್ಯಕ್ರಮವನ್ನೂ ನಡೆಸಲಾಗಿದೆ. ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಈ ಕಾರ್ಯಕ್ರಮವನ್ನು ಸರಳವಾಗಿ ನಡೆಸಲಾಗಿದೆ. ಹೆಚ್ಚು ಭಕ್ತರಿಗೆ ಅವಕಾಶ ಕಲ್ಪಿಸಲಾಗಿಲ್ಲ ಎಂಬುದಾಗಿಯೂ ಶರ್ಮಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.