ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವ ಸುದ್ದಿ ಅಸಲಿ, ಯಾವ ಸುದ್ದಿ ನಕಲಿ ಎಂಬುದೇ ಇತ್ತೀಚಿನ ದಿನಗಳಲ್ಲಿ ಜನರಿಗೆ ಹೆಚ್ಚು ಗೊಂದಲವನ್ನು ಸೃಷ್ಟಿ ಮಾಡುತ್ತಿರುವ ವಿಚಾರ. ಈ ಗೊಂದಲದಿಂದಲೇ ಸಮಾಜದಲ್ಲಿ ಅನೇಕ ಸಮಸ್ಯೆಗಳು ಸಹ ಸೃಷ್ಟಿಯಾಗುತ್ತಿರುವುದು ತೀರಾ ಸಾಮಾನ್ಯ ವಿಚಾರವೇ ಆಗಿದೆ. ಆದರೆ ಇದೀಗ ಇಂತಹ ನಕಲಿ ಸುದ್ದಿಗಳು ಹರಡುವುದನ್ನು ತಡೆಯಲು, ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಲು ಬೆಂಗಳೂರಿನ 20 ವರ್ಷದ ಹುಡುಗ ಯಶ್ ಜೈಶ್ವಾಲ್ ಅವರು ಚಾಟ್ ಬಾಟ್ ಎಂಬ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ಅವರು ಜನರಿಗೆ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಲು ನೆರವಾಗುವ, ವಿಶ್ವಾಸಕ್ಕೆ ಯೋಗ್ಯವಾದ ಸುದ್ದಿಗಳನ್ನು ತಿಳಿದುಕೊಳ್ಳುವುದಕ್ಕೆ ಪೂರಕವಾಗುವಂತೆ ಫೋನ್ ಸಂಖ್ಯೆಯಲ್ಲಿ ಹೋಸ್ಟ್ ಮಾಡಲಾದ ಎನ್ ಎಲ್ ಪಿ- ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ಆಧಾರಿತ ಧ್ವನಿ/ ಚಾಟ್ ಬಾಟ್ ಅನ್ನು ಅಭಿವೃದ್ಧಿ ಮಾಡಿದ್ದಾರೆ. ಇದರ ಮೂಲಕ ಜನರು ಸುಲಭವಾಗಿ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಬಹುದು ಎಂಬುದಾಗಿಯೂ ಯಶ್ ಮಾಹಿತಿ ನೀಡಿದ್ದಾರೆ. ಇದನ್ನು ಅಂತರ್ಜಾಲ ಇಲ್ಲದೆಯೇ ಕರೆ ಮಾಡುವ ಮೂಲಕವೂ ಬಳಕೆ ಮಾಡಬಹುದಾಗಿದೆ ಎಂದು ಯಶ್ ತಿಳಿಸಿದ್ದಾರೆ.
ಕೊರೋನಾ ಸಂಬಂಧಿಸಿದಂತೆ ಸಹ ಮಾಹಿತಿಯನ್ನು ಈ ಚಾಟ್ ಬಾಟ್ ನಲ್ಲಿ ಅಳವಡಿಸಲಾಗಿದ್ದು, ಈ ಸಂಬಂಧ ಯಾವುದೇ ಸಂದೇಹವನ್ನು ಕೇಳುವ ಮೂಲಕ ಪರಿಹರಿಸಿಕೊಳ್ಳಬಹುದು ಎಂದೂ ಯಶ್ ಮಾಹಿತಿ ನೀಡಿದ್ದಾರೆ. ಇನ್ನು ಇದನ್ನು ಇಂಡೋನೇಷ್ಯಾ ಮತ್ತು ಯುಎಸ್ಎ ಯ ಮೂವರು ವಿದ್ಯಾರ್ಥಿಗಳ ಜೊತೆ ಸೇರಿ ಯಶ್ ಅಭಿವೃದ್ಧಿ ಮಾಡಿದ್ದಾರೆ.
ಇವರು ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ. ಕಳೆದ ಎಪ್ರಿಲ್ ತಿಂಗಳಲ್ಲಿ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿವಿಯಲ್ಲಿ ನಡೆದ ಇಂಟರ್ನ್ಯಾಷನಲ್ ಹ್ಯಾಕಥಾನ್ ನಲ್ಲಿ ಇವರಿಗೆ 200 ಡಾಲರ್ ನಗದು ಬಹುಮಾನವೂ ಸಿಕ್ಕಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.