ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗುತ್ತಿಗಾರು ಪೇಟೆಯಲ್ಲು ರಿಕ್ಷಾ ಸೇರಿದಂತೆ ಇತರ ವಾಹನಗಳಿಗೆ ವ್ಯವಸ್ಥಿತ ಪಾರ್ಕಿಂಗ್ ಹಾಗೂ ಪೇಟೆಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲು ನಿರ್ಣಯಿಸಲಾಯಿತು.
ಗುತ್ತಿಗಾರು ಗ್ರಾಪಂ ಪ್ರಥಮ ಸಾಮಾನ್ಯ ಸಭೆ ಅಧ್ಯಕ್ಷ ಅಚ್ಚುತ ಗುತ್ತಿಗಾರು ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯ ಆರಂಭದಲ್ಲಿ 2014-15ರ ಸಾಲಿನ ಜಮಾ ಖರ್ಚುಗಳ ಬಗ್ಗೆ ವಿವರವನ್ನು ಸಭೆಯ ಮುಂದಿಟ್ಟರು. ಈ ಸಂದರ್ಭದಲ್ಲಿ ಕೆಲವೊಂದು ಖರ್ಚು ವೆಚ್ಚಗಳ ಬಗ್ಗೆ ಸದಸ್ಯರು ಪ್ರಶ್ನಿಸಿದರು.ಬಳಿಕ ಭಾರತೀಯ ಜೀವವಿಮಾ ನಿಗಮದಿಂದ ಕೊಡಮಾಡುವ ಸೋಲಾರ್ ಬೀದಿದೀಪವನ್ನು ಬಸ್ನಿಲ್ದಾಣದ ಬಳಿ ಅಳವಡಿಸಲು ಸಭೆ ಅನುಮೋದನೆ ನೀಡಿತು. ಇದೇ ವೇಳೆ ಗುತ್ತಿಗಾರು ಪೇಟೆಯಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಸೇರಿದಂತೆ ಇತರ ವಿಚಾರಗಳ ಚರ್ಚೆಯಾಯಿತು.
ಅಂತಿಮವಾಗಿ ವಾಹನ ನಿಲುಗಡೆಗೆ ಸೂಕ್ತ ಕ್ರಮ, ಸಂತೆ ಮಾರುಕಟ್ಟೆಯಲ್ಲಿ ಶನಿವಾರ ಮಾತ್ರವೇ ತರಕಾರಿ ಮಾರಾಟ,ಹಸಿ ಮೀನು ಮಾರಾಟಕ್ಕೆ ಸೂಕ್ತ ವ್ಯವಸ್ಥೆ,ಗುತ್ತಿಗಾರು ಪೇಟೆಯ ದಾರಿದೀಪ ವ್ಯವಸ್ಥೆ,ಕೋಳಿತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವುದರ ವಿರುದ್ದ ಕ್ರಮ, ನಗರದಲ್ಲಿ ಸ್ವಚ್ಚತೆಗೆ ಆದ್ಯತೆ ಮೊದಲಾದ ವಿಚಾರಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಮಿತಿಗಳಿಗೆ ಆಯ್ಕೆ ಮಾಡಲಾಯಿತು. ಪಂಚಾಯತ್ ಪಿಡಿಒ ಜಯರಾಜ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಸೀತಾರಾಮ ಸ್ವಾಗತಿಸಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.