ನವದೆಹಲಿ: ಕೆಲವು ದಿನಗಳ ಹಿಂದಷ್ಟೇ ಚೀನಾ ಅಭಿವೃದ್ಧಿ ಪಡಿಸಿದ ಟಿಕ್ಟಾಕ್ ಅನ್ನು ಹಿಂದಿಕ್ಕಿ ಟಾಪ್ ಒನ್ ಸ್ಥಾನಕ್ಕೆ ಏರಿದ್ದ ಮಿತ್ರೋನ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡಿಲೀಟ್ ಮಾಡಲಾಗಿತ್ತು. ಆದರೆ ಮಿತ್ರೋನ್ ಆ್ಯಪ್ ಇದೀಗ ಮತ್ತೆ ಗೂಗಲ್ ಪ್ಲೇ ಸ್ಟೋರ್ ಆ್ಯಪ್ನಲ್ಲಿ ಮರಳಿ ಬಂದಿದೆ ಎಂದು ವರದಿಯಾಗಿದೆ.
ಕೊರೋನಾ ನಂತರ ಭಾರತದಲ್ಲಿ ಚೀನಾದ ಟಿಕ್ಟಾಕ್ ಮನೋರಂಜನಾ ಆ್ಯಪ್ಗೆ ತೀವ್ರ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಭಾರತ ಅಭಿವೃದ್ಧಿ ಮಾಡಿದ ಮಿತ್ರೋನ್ ಆ್ಯಪ್ ಹೆಚ್ಚು ಜನರಿಂದ ಡೌನ್ಲೋಡ್ ಆಗುವ ಮೂಲಕ ಇಡೀ ದೇಶದಾದ್ಯಂತ ಸಂಚಲನ ಸೃಷ್ಟಿಸಿತ್ತು. ಆದರೆ ಈ ಜನಪ್ರಿಯತೆಯ ಬಳಿಕ ಕಳೆದ ವಾರ ಗೂಗಲ್ ಪ್ಲೇ ಸ್ಟೋರ್ನಿಂದ ಮಿತ್ರೋನ್ಗೆ ಕಿಕೌಟ್ ನೀಡಲಾಗಿತ್ತು. ಆದರೆ ಈ ಬಗ್ಗೆ ಮಿತ್ರೋನ್ ಆಗಲಿ ಗೂಗಲ್ ಆಗಲಿ ಯಾವುದೇ ರೀತಿ ಸ್ಪಷ್ಟೀಕರಣವನ್ನು ನೀಡಿರಲಿಲ್ಲ.
ಆದರೆ ಇದೀಗ ಮತ್ತೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಮಿತ್ರೋನ್ ಆ್ಯಪ್ ಮತ್ತೆ ಕಾಣಿಸಿಕೊಂಡಿದೆ. ಇದನ್ನು ಅಭಿವೃದ್ಧಿ ಮಾಡಿದದ ರೂರ್ಕಿ ಐಐಟಿಯ ವಿದ್ಯಾರ್ಥಿಗಳಾದ ಅನೀಷ್ ಖಂಡೇಲ್ ವಾಲ್ ಮತ್ತು ಶಿವಾಂಕ್ ಅಗರ್ವಾಲ್ ಅವರೂ ಈ ಆ್ಯಪ್ ಭಾರತದ್ದೇ ಎಂಬುದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಅಗತ್ಯ ದಾಖಲೆಗಳನ್ನು ನೀಡಿದ ನಂತರ ಮತ್ತೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆ್ಯಪ್ ಸ್ಥಾನ ಪಡೆದಿದ್ದಾಗಿಯೂ ಈ ಯುವ ಸಂಶೋಧಕರು ಮಾಹಿತಿ ನೀಡಿದ್ದಾರೆ.
ಈ ಆ್ಯಪ್ ಪಾಕಿಸ್ಥಾನದಿಂದ ಅಭಿವೃದ್ಧಿ ಆಗಿರುವುದು ಎಂಬುದು ಊಹಾಪೋಹ, ವದಂತಿಗಳು ಹುಟ್ಟಿಕೊಂಡ ನಂತರದಲ್ಲಿ ಗೂಗಲ್ ಇದನ್ನು ಪ್ಲೇ ಸ್ಟೋರ್ನಿಂದ ಡಿಲೀಟ್ ಮಾಡಿತ್ತು. ಆದರೆ ಇದೀಗ ಇದನ್ನು ಅಭಿವೃದ್ಧಿ ಮಾಡಿದ ಭಾರತೀಯ ತಂತ್ರಜ್ಞರು ಪೂರಕ ಮಾಹಿತಿ ಒದಗಿಸಿದ್ದರಿಂದಾಗಿ ಆ್ಯಪ್ ಮತ್ತೆ ಪ್ಲೇ ಸ್ಟೋರ್ನಲ್ಲಿ ಬಳಕೆದಾರರಿಗೆ ಲಭ್ಯವಾಗಿದೆ. ಆ ಮೂಲಕ ಈವರೆಗೆ ಹಬ್ಬಿದ್ದ ಎಲ್ಲಾ ವದಂತಿಗಳಿಗೂ ತೆರೆ ಬಿದ್ದಿದೆ.
ಇನ್ನು ಕಳೆದೆರಡು ವಾರಗಳ ಹಿಂದೆ ಚೀನಾದ, ಅತೀ ಹೆಚ್ಚು ಜನರು ಬಳಕೆ ಮಾಡುತ್ತಿದ್ದ ಟಿಕ್ಟಾಕ್ ಅನ್ನು ರೇಟಿಂಗ್ನಲ್ಲಿ ಹಿಂದಿಕ್ಕುವ ಮೂಲಕ ಮಿತ್ರೋನ್ ಆ್ಯಪ್ ಸದ್ದು ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.