ರೊಮೇನಿಯಾ: ಚೀನಾದಿಂದ ಜೀವ ಪಡೆದ ಕಿಲ್ಲರ್ ಕೊರೋನಾ ವಿಶ್ವವನ್ನೇ ನಡುಗಿಸಿದೆ. ಇನ್ನೂ ಔಷಧವಿಲ್ಲದ ಈ ರೋಗಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಮುಖ್ಯ ನಿಯಂತ್ರಣ ಕ್ರಮವಾಗಿದೆ. ಭಾರತವೂ ಸೇರಿದಂತೆ ಇತರ ರಾಷ್ಟ್ರಗಳು ಜನರಿಗೆ ಈ ಕುರಿತಂತೆ ಅದೆಷ್ಟೇ ಕಿವಿಮಾತು ಹೇಳಿದರೂ, ಕೆಲವರಿಗಂತೂ ಅದು ನಾಟುವುದೇ ಇಲ್ಲ.
ಇಃತಹ ಸಂದರ್ಭದಲ್ಲಿ ರೊಮೇನಿಯಾದ ಶೂಗಳನ್ನು ತಯಾರಿಸುವ ವ್ಯಕ್ತಿಯೊಬ್ಬರು ಉದ್ದವಾದ ಶೂಗಳನ್ನು ಸಿದ್ದ ಪಡಿಸುವ ಮೂಲಕ ಕೊರೋನಾಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ. ಶೂ ತಯಾರಿಕೆಲ್ಲಿ 39 ವರ್ಷಗಳಿಂದ ಸಿದ್ಧಹಸ್ತರಾಗಿರುವ ಗ್ರಿಗೊರ್ ಲಾಪ್ ಅವರೇ ಇಂತಹ ಸ್ಪೆಷಲ್ ಶೂ ಗಳನ್ನು ಸಿದ್ಧ ಪಡಿಸಿ ಇದೀಗ ಮನೆ ಮಾತಾಗಿರುವ ವ್ಯಕ್ತಿ. ಇವರು ಸುಮಾರು ಒಂದರಿಂದ ಒಂದೂವರೆ ಮೀಟರ್ಗಳಷ್ಟು ಅಂತರ ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುವಂತಹ ಶೂ ಗಳನ್ನು ಸಿದ್ಧ ಮಾಡಿದ್ದು, ಆ ಮೂಲಕ ಜನರಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಕ್ಕೆ ಸಹಾ ಮಾಡಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಶೂ ತಯಾರಕ, ಜನರು ಸಾಮಾಜಿಕ ಅಂತರದ ನಿಯಮವನ್ನು ಗಾಳಿಗೆ ತೂರಿ ವರ್ತಿಸೂತ್ತಿರುವುದರಿಂದಲೇ ಕೊರೋನಾ ಹೆಚ್ಚು ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಇದನ್ನು ಹಲವು ಕಡೆಗಳಲ್ಲಿ ಗಮನಿಸಿ, ಉದ್ದನೆಯ ಮೂತಿಯುಳ್ಳ ಶೂ ಗಳನ್ನು ತಯಾರಿ ಮಾಡಲಾಗಿದೆ. ಇವುಗಳ ತಯಾರಿಕೆಗೆ ತನಗೆ 2 ದಿನಗಳ ಕಾಲಾವಕಾಶ ಬೇಕಾಗಿದ್ದು, ಈ ವರೆಗೆ 5 ಶೂ ಗಳ ಆರ್ಡರ್ ಸಹ ದೊರೆತಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.