ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ನಿರಾಳತೆ ನೀಡುವ ವಿಷಯವೆಂದರೆ ವೃದ್ಧಿಯಾಗುತ್ತಿರುವ ಚೇತರಿಕೆ ದರ.
ಭಾರತ ವಿಶ್ವದಲ್ಲೇ ಅತಿ ಹೆಚ್ಚು ಚೇತರಿಕೆ ದರವನ್ನು ಹೊಂದಿದೆ. ಭಾರತದ ಕೊರೋನ ಚೇತರಿಕೆ ದರವು ಶೇ. 50 ಕ್ಕೆ ಸನಿಹವಾಗುತ್ತಿದೆ.
ಪ್ರಸ್ತುತ ಭಾರತದ ಶೇಕಡಾ 48 ರಷ್ಟು ಮಂದಿ ಕೊರೋನವೈರಸ್ ರೋಗಿಗಳು ವೈರಸ್ ಮುಕ್ತರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ. ಭಾರತದ ಮರಣ ಪ್ರಮಾಣ ಕೂಡ ತಗ್ಗುತ್ತಿದೆ. ಶೇ. 3 ರಿಂದ ಶೇ. 2.8ಕ್ಕೆ ಇಳಿಕೆಯಾಗಿದೆ.
ದೈನಂದಿನ ಆಧಾರದಲ್ಲೂ ಭಾರತವು ಅತಿ ಹೆಚ್ಚು ಚೇತರಿಕೆಯನ್ನು ಕಾಣುತ್ತಿದೆ. ನಿತ್ಯ ಕೊರೋನವೈರಸ್ ಪ್ರಕರಣಗಳು ದಾಖಲಾಗುವ ಸಂಖ್ಯೆ 8000 ಆಸುಪಾಸಿನಲ್ಲಿ ಇದ್ದರು ಕೂಡ, ಚೇತರಿಕೆ ದರ ಕೂಡ ದೊಡ್ಡ ಪ್ರಮಾಣದಲ್ಲಿ ಇದೆ.
ಪ್ರಸ್ತುತ ಭಾರತದ ಒಟ್ಟು ಕೊರೋನವೈರಸ್ ಪ್ರಕರಣಗಳ ಸಂಖ್ಯೆ 190,535 ಆಗಿದೆ, 5,394 ಸಾವುಗಳು ಸಂಭವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.