ವಾಷಿಂಗ್ಟನ್: ಚೀನಾದ ಮಿಲಿಟರಿ ಒಡ್ಡುತ್ತಿರುವ ಬೆದರಿಕೆಯನ್ನು ಎದುರಿಸಲು ಅಮೆರಿಕಾವು ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ರಾಷ್ಟ್ರಗಳೊಂದಿಗೆ ಪಾಲುದಾರಿಕೆ ಮಾಡಬಹುದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಅವರು ಭಾನುವಾರ ಹೇಳಿದ್ದಾರೆ.
ಚೀನೀ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ಮಿಲಿಟರಿ ಆಧುನೀಕರಣಗೊಂಡಿರುವುದು ನಿಜವೆಂದು ಹೇಳಿರುವ ಕಾರ್ಯದರ್ಶಿ ಪೊಂಪಿಯೊ, ಸಿಪಿಪಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ತಮ್ಮ ಮಿಲಿಟರಿ ಸಾಮರ್ಥ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದ್ದಾರೆ ಎಂದು ಪ್ರತಿಪಾದಿಸಿದರು.
ಯುಎಸ್ ಮಿಲಿಟರಿ ಮತ್ತು ರಾಷ್ಟ್ರೀಯ ಭದ್ರತಾ ಸ್ಥಾಪನೆಯು ಅಮೆರಿಕದ ಜನರನ್ನು ರಕ್ಷಿಸಬಲ್ಲದು ಎಂದು ಕಾರ್ಯದರ್ಶಿ ಪೊಂಪಿಯೊ ವಿಶ್ವಾಸ ವ್ಯಕ್ತಪಡಿಸಿದರು, ಅಲ್ಲದೇ ಅಮೆರಿಕಾವು ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ, ಜಪಾನ್, ಬ್ರೆಜಿಲ್, ಯುರೋಪ್ ಮತ್ತು ವಿಶ್ವದಾದ್ಯಂತ ಮಿತ್ರರಾಷ್ಟ್ರಗಳೊಂದಿಗೆ ಉತ್ತಮ ಪಾಲುದಾರನಾಗಬಹುದು ಎಂದು ಪ್ರತಿಪಾದಿಸಿದರು.
ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಗಡಿ ವಿವಾದ ಮತ್ತು ಉದ್ವಿಗ್ನತೆಯ ಪ್ರಶ್ನೆಗೆ ಉತ್ತರಿಸಿದ ಕಾರ್ಯದರ್ಶಿ ಪೊಂಪಿಯೊ, “ಈ ಬೆಳವಣಿಗೆಗೆ ಸಿಸಿಪಿಯು ಪ್ರಯತ್ನವನ್ನು ಬಹಳ ಸಮಯದಿಂದ ನಡೆಸುತ್ತಿದೆ. ಅವರು ಖಂಡಿತವಾಗಿಯೂ ತಮ್ಮ ಅನುಕೂಲಕ್ಕೆ ತಾಂತ್ರಿಕ ಪರಿಸ್ಥಿತಿಯನ್ನು ಬಳಸಿಕೊಳ್ಳಲಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.