ಇಟಲಿ: ಕೊರೋನಾವೈರಸ್ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವ ಆರೋಪಗಳನ್ನು ವಿಶ್ವದ ಹಲವು ರಾಷ್ಟ್ರಗಳು WHO ವಿರುದ್ಧ ಮಾಡಿವೆ. ಈ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಹೊಸ ರೂಪವನ್ನು ನೀಡುವ ಅಗತ್ಯತೆ ಇದೆ ಎಂಬ ಮೋದಿ ಅವರ ಮಾತಿಗೆ ಇಟಲಿ ಸಹಮತ ವ್ಯಕ್ತಪಡಿಸಿದೆ.
ಮಹಾಮಾರಿ ಕೊರೋನಾ ಚೀನಾದಲ್ಲಿಯೇ ಸೃಷ್ಟಿಯಾಗಿದ್ದರೂ, ತನ್ನ ಉಗ್ರ ಸ್ವರೂಪವನ್ನು ಬಿಚ್ಚಿಟ್ಟಿದ್ದು ಮಾತ್ರ ಇಟಲಿಯಲ್ಲಿ. ಬೇರೆಲ್ಲಾ ರಾಷ್ಟ್ರಗಳಲ್ಲಿ ಕೊರೋನಾ ಅಟ್ಟಹಾಸ ಮಾಡಿದ್ದರೂ ಇಟಲಿ ಎದುರಿಸಿದ ಮಟ್ಟಿನ ತೀವ್ರತೆಯನ್ನು ಇನ್ಯಾವ ದೇಶವೂ ಎದುರಿಸಿರಲಿಲ್ಲ. ಕೊರೋನಾ ಕುರಿತಂತೆ ಎಚ್ಚರವಾಗಿರುವಂತೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ್ದರೂ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾತ್ರ ಹೆಚ್ಚು ಕೆಲಸ ಮಾಡಿಲ್ಲ ಎಂಬ ಆರೋಪವನ್ನು ಇಟಲಿ ಸೇರಿದಂತೆ ಇನ್ನಿತರ ದೇಶಗಳು ಮಾಡಿದ್ದವು. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಭಾರತದ ಪ್ರಧಾನಿ ಮೋದಿ ವಿಶ್ವಸಂಸ್ಥೆಗೆ ಹೊಸ ರೂಪ ನೀಡಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದು, ಇದಕ್ಕೆ ಭಾರತದ ಜೊತೆಗೆ ಇಟಲಿಯೂ ಕೈ ಜೋಡಿಸುವುದಾಗಿ ತಿಳಿಸಿದೆ. ಅಲ್ಲದೆ ಕೊರೋನಾ ಸಂಬಂಧ ಇಟಲಿ ಈಗಾಗಲೇ ಸ್ವತಂತ್ರ ತನಿಖೆಗೂ ಮುಂದಾಗಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಯುರೋಪಿಯನ್ ವಿದೇಶಾಂಗ ಸಚಿವ ವಿನ್ಸೆಂಜೋ ಅಮೆಂಡೊಲಾ, ಕೊರೋನಾ ನಂತರದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ವಿಚಾರಗಳನ್ನು ಸುಸ್ಥಿತಿಗೆ ತರುವಲ್ಲಿ, ಮೇಲಕ್ಕೆತ್ತುವಲ್ಲಿ ಕೆಲಸವಾಗಬೇಕಿದೆ. ವಿಶ್ವದ ಬೇಡಿಕೆಗನುಗುಣವಾಗಿ ಉತ್ಪಾದನೆ, ವಸ್ತುಗಳ ಪೂರೈಕೆ ಮೊದಲಾದ ವಿಚಾರಗಳಲ್ಲಿ ಇಟಲಿ ಭಾರತಕ್ಕೆ ಸಹಕಾರ ನೀಡಲಿದೆ. ಅದಕ್ಕಾಗಿ ರೂಪುರೇಶೆಗಳನ್ನು ಹಾಕಿಕೊಳ್ಳುವಲ್ಲಿಯೂ ಭಾರತದ ಜೊತೆಗೆ ಕೈ ಜೋಡಿಸಲಿರುವುದಾಗಿ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.