ನವದೆಹಲಿ: ಕೊರೋನಾ ಲಾಕ್ಡೌನ್ ಸಂಕಷ್ಟದಿಂದಾಗಿ ದೇಶದ ಆರ್ಥಿಕತೆ ಪಾತಾಳದತ್ತ ಸಾಗಿದೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಕಂಪನಿಗಳು ಸಂಪನ್ಮೂಲ ನಷ್ಟ ಅನುಭವಿಸುತ್ತಿದ್ದು, ಸಂಬಳ ಕಡಿತ, ಉದ್ಯೋಗ ಕಡಿತದಂತಹ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ತಾತ್ಕಾಲಿಕವಾಗಿ 50,000 ಮಂದಿ ನೌಕರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದಕ್ಕೆ ಅಮೆಜಾನ್ ಮುಂದಾಗಿದೆ.
ಕೊರೋನಾ ಸಂದರ್ಭದಲ್ಲಿ ನಿಯಂತ್ರಣ ಕ್ರಮಗಳನ್ನನುಸರಿಸುವ ಮೂಲಕವೇ ಗ್ರಾಹಕರಿಗೆ ಗುಣಮಟ್ಟದ, ಮತ್ತು ತ್ವರಿತ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಮುಂದಾಗಿರುವುದಾಗಿಯೂ ಅಮೆಜಾನ್ ಮಾಹಿತಿ ನೀಡಿದೆ. ಯಾವ ಗ್ರಾಹಕರಿಗೂ ಸಮಸ್ಯೆಯಾಗದಂತೆ ವಹಿವಾಟು ನಡೆಸುವುದು, ಸೇವೆ ನೀಡುವ ನಿಟ್ಟಿನಲ್ಲಿ ಈ ನೇಮಕಾತಿ ನಡೆಸುವುದಾಗಿಯೂ ಸಂಸ್ಥೆ ತಿಳಿಸಿದೆ. ಡೆಲಿವರಿ, ಆಫೀಸ್ ವರ್ಕ್, ಸ್ಟಾಫ್ ಸೇರಿದಂತೆ ವಿವಿಧ ವಿಭಾಗಗಳಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಸಲಿರುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ.
ಲಾಕ್ಡೌನ್ ಸಂದರ್ಭದಿಂದ ತೊಡಗಿದಂತೆ ಈ ವರೆಗೆ ಆನ್ಲೈನ್ ವ್ಯವಹಾರಕ್ಕೆ ಜನರು ಹೆಚ್ಚು ಒಗ್ಗಿಕೊಂಡಿದ್ದಾರೆ. ಅಗತ್ಯ ವಸ್ತು, ದಿನಸಿ ವಸ್ತುಗಳ ಸಾಗಾಟ ಸೇವೆಯಲ್ಲಿಯೂ ಅಮೆಜಾನ್ ಕಾರ್ಯ ನಿರ್ವಹಿಸಿತ್ತು. ಲಾಕ್ಡೌನ್ ಜಾರಿಯಾದಂದಿನಿಂದಲೂ ಅಮೆಜಾನ್ ತನ್ನ ಸೇವೆಯನ್ನು ನೀಡುತ್ತಲೇ ಬಂದಿದ್ದು, 2025 ರ ವೇಳೆಗೆ ಸಂಸ್ಥೆ 10 ಲಕ್ಷದಷ್ಟು ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡುವುದಾಗಿಯೂ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.