ಬೆಂಗಳೂರು : ಕೊರೋನಾ ಲಾಕ್ಡೌನ್ನಿಂದಾಗಿ ಮಾರ್ಚ್ 22 ರಿಂದಲೇ ಸೇವೆಯನ್ನು ಸ್ಥಗಿತಗೊಳಿಸಿದ್ದ ನೈರುತ್ಯ ರೈಲ್ವೆ ಇಂದಿನಿಂದ ಮತ್ತೆ ಕಾರ್ಯಾರಂಭ ಮಾಡಿದೆ. ಈ ವರೆಗೆ ಕೇವಲ ಗೂಡ್ಸ್ ರೈಲುಗಳ ಓಡಾಟವನ್ನು ಮಾತ್ರವೇ ನಡೆಸುತ್ತಿದ್ದ ನೈರುತ್ಯ ರೈಲ್ವೆ ಇಂದಿನಿಂದ ತೊಡಗಿದಂತೆ ಅಂತರಜಿಲ್ಲಾ ರೈಲುಗಳ ಓಡಾಟವನ್ನು ಆರಂಭಿಸಿದೆ. ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಲ್ಲಿ ಹಸಿರು ನಿಶಾನೆ ತೋರಿಸಲಾಯಿತು. ಈ ಮೂಲಕ ಪ್ರಯಾಣಿಕ ರೈಲು ಸೇವೆಗಳನ್ನು ನೈರುತ್ಯ ರೈಲ್ವೆ ಆರಂಭ ಮಾಡಿತು.
ರೈಲ್ವೆ ಇಲಾಖೆ ಬೆಂಗಳೂರು- ಮೈಸೂರು, ಬೆಂಗಳೂರು- ಬೆಳಗಾವಿಗಳ ನಡುವೆ 2 ರೈಲುಗಳ ಸಂಚಾರಕ್ಕೆ ಅನುಮೋದನೆ ನೀಡಿದ್ದು, ಇಂದಿನಿಂದಲೇ ಬೆಂಗಳೂರು- ಬೆಳಗಾವಿ ಟ್ರೈ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (06597) ಅನ್ನು ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಓಡಿಸಲು ನಿರ್ಧರಿಸಿದೆ. ಬೆಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಡಲಿರುವ ಈ ರೈಲು ಯಶವಂತಪುರ (8:09), ತುಮಕೂರು (8:59), ಅರಸೀಕೆರೆ (10: 25), ಬೀರೂರು (11:13), ಚಿಕ್ಕಜಾಜೂರು (ಮಧ್ಯಾಹ್ನ 12:09), ದಾವಣಗೆರೆ (12:48), ಹರಿಹರ (1:03), ರಾಣಿಬೆನ್ನೂರು (1:25), ಹಾವೇರಿ (1:51), ಹುಬ್ಬಳ್ಳಿ (3:25), ಧಾರವಾಡ (3:45) ಮಾರ್ಗವಾಗಿ ಸಂಜೆ 6:30 ಗಂಟೆಗೆ ಬೆಳಗಾವಿಗೆ ತಲುಪಲಿದೆ. ಅದೇ ರೀತಿ ಮೇ 23 ರಿಂದ ಬೆಳಗಾವಿ-ಬೆಂಗಳೂರು ಟ್ರೈ ವೀಕ್ಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ (06598) ರೈಲು ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ 8:00 ಗಂಟೆಗೆ ಬೆಳಗಾವಿಯಿಂದ ಹೊರಟು ಧಾರವಾಡ (10:15), ಹುಬ್ಬಳ್ಳಿ (10:37), ಹಾವೇರಿ (11:40), ರಾಣಿಬೆನ್ನೂರು (ಮಧ್ಯಾಹ್ನ 12:05), ಹರಿಹರ (12:27), ದಾವಣಗೆರೆ (12:43), ಚಿಕ್ಕಜಾಜೂರು (1:35), ಬೀರೂರು (2:35), ಅರಸೀಕೆರೆ (3:10), ತುಮಕೂರು (ಸಂಜೆ 4:35), ಯಶವಂತಪುರ (5:40) ಮಾರ್ಗವಾಗಿ ಸಂಜೆ 6:30 ಗಂಟೆಗೆ ಬೆಂಗಳೂರು ತಲುಪಲಿದೆ ಎಂದು. ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಈ ರೈಲಿನಲ್ಲಿ ಪ್ರತಿ ಭೋಗಿಯಲ್ಲಿ 106 ರಂತೆ 1484 ಆಸನ ಸಾಮರ್ಥ್ಯ ಹೊಂದಿರುವುದಾಗಿಯೂ ಇಲಾಖೆ ತಿಳಿಸಿದೆ.
ಇಂದಿನಿಂದ ಬೆಂಗಳೂರು-ಮೈಸೂರು ವಿಶೇಷ (06503) ರೈಲು ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಕೆಎಸ್ಆರ್ ಬೆಂಗಳೂರಿನಿಂದ ಬೆಳಗ್ಗೆ 9:20 ಗಂಟೆಗೆ ಹೊರಟು ಕೆಂಗೇರಿ (9:43), ರಾಮನಗರಂ (10:15), ಮದ್ದೂರು (10:48), ಮಂಡ್ಯ (11:08), ಪಾಂಡವಪುರ (11:44), ನಾಗನಹಳ್ಳಿ (11: 59) ಮಧ್ಯಾಹ್ನ 12:45 ಗಂಟೆಗೆ ಮೈಸೂರು ತಲುಪಲಿದೆ. ಅದೇ ರೀತಿ ಮೈಸೂರು-ಬೆಂಗಳೂರು ವಿಶೇಷ (06504) ರೈಲು ಭಾನುವಾರ ಹೊರತುಪಡಿಸಿದಂತೆ ಉಳಿದ ದಿನಗಳಲ್ಲಿ ಮೈಸೂರಿನಿಂದ ಮಧ್ಯಾಹ್ನ 1:45 ಗಂಟೆಗೆ ಹೊರಟು ನಾಗನ ಹಳ್ಳಿ (1:54), ಪಾಂಡವಪುರ (1:10), ಮಂಡ್ಯ (1:40), ಮದ್ದೂರು (3:02), ರಾಮನಗರಂ (3:34), ಕೆಂಗೇರಿ (ಸಂಜೆ 4:10) ಮಾರ್ಗವಾಗಿ ಸಂಜೆ 5:00 ಗಂಟೆಗೆ ಬೆಂಗಳೂರು ತಲುಪಲಿದೆ. ಭಾನುವಾರ ಲಾಕ್ಡೌನ್ ಕ್ರಮ ಜಾರಿಯಲ್ಲಿರುವುದರಿಂದ ಈ ನಾಲ್ಕು ರೈಲುಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಇದರ ಹೊರತಾದಂತೆ ಶ್ರಮಿಕ್ ರೈಲುಗಳು ಓಡಾಟ ನಡೆಸಲಿವೆ. ಇನ್ನು ರೈಲು ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರು ಕೊರೋನಾ ನಿಯಂತ್ರಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆಯೂ ಸೂಚನೆ ನೀಡಲಾಗಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೂ ಪ್ರಯಾಣಿಕರು ಗಮನ ಹರಿಸುವಂತೆ ಇಲಾಖೆ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.