ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮೈನ್ಸ್) ಮತ್ತು ನೀಟ್ 2020 ಪರೀಕ್ಷೆಗಳಿಗೆ ಹಾಜರಾಗಲು ಸಜ್ಜಾಗಿರುವ ವಿದ್ಯಾರ್ಥಿಗಳಿಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್ಆರ್ಡಿ) ಮಂಗಳವಾರ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಅಣಕು ಪರೀಕ್ಷಾ ಸ್ಮಾರ್ಟ್ಫೋನ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ.
ಮುಂಬರುವ ತಿಂಗಳುಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜಿಇಇ ಮೈನ್ಸ್ ಮತ್ತು ನೀಟ್ ಪರೀಕ್ಷೆಯನ್ನು ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
‘ನ್ಯಾಷನಲ್ ಟೆಸ್ಟ್ ಅಭ್ಯಾಸ್’ ಎಂದು ಹೆಸರಿಸಲಾಗಿರುವ ಈ ಅಪ್ಲಿಕೇಶನ್, ರಾಷ್ಟ್ರದಾದ್ಯಂತದ ವಿದ್ಯಾರ್ಥಿಗಳಿಗೆ ಜೆಇಇ, ನೀಟ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಸಹಾಯ ಮಾಡಲು, ಉತ್ತಮ ಗುಣಮಟ್ಟದ ಪರೀಕ್ಷೆಗಳಿಗೆ ಉಚಿತವಾಗಿ ಪ್ರವೇಶವನ್ನು ನೀಡುವಂತೆ ಮಾಡುವ ಉದ್ದೇಶ ಹೊಂದಿದೆ.
ಆ್ಯಪ್ ಪ್ರಾರಂಭಿಸಿ ಮಾತನಾಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, “ಅಭ್ಯಾಸ್ ಅನ್ನು ಪರೀಕ್ಷೆಗೆ ತಯಾರಾಗುವ ಯಾವುದೇ ವಿದ್ಯಾರ್ಥಿಯು ತಯಾರಿಯಿಂದ ಹಿಂದೆ ಉಳಿಯಬಾರದು ಎಂದು ಖಚಿತಪಡಿಸಿಕೊಳ್ಳಲು ಸಮಯೋಚಿತವಾಗಿ ವಿನ್ಯಾಸಗೊಳಿಸಲಾಗಿದೆ, ವಿಶೇಷವಾಗಿ ಶಿಕ್ಷಣ ಸಂಸ್ಥೆಗಳು ಈಗ ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ನಷ್ಟವಾಗಿದೆ. ಕೋವಿಡ್ -19 ಲಾಕ್ಡೌನ್ ಕಾರಣದಿಂದ ಎನ್ಟಿಎಯ ಟೆಸ್ಟ್-ಪ್ರಾಕ್ಟೀಸ್ ಕೇಂದ್ರಗಳನ್ನು ಮುಚ್ಚಲಾಗಿದೆ” ಎಂದಿದ್ದಾರೆ.
ಅಪ್ಲಿಕೇಶನ್ನಲ್ಲಿ ಪ್ರತಿದಿನ ಹೊಸ ಅಣಕು ಪರೀಕ್ಷೆಯನ್ನು ಬಿಡುಗಡೆ ಮಾಡಲು ಎನ್ಟಿಎ ಯೋಜಿಸಿದೆ, ಇದನ್ನು ವಿದ್ಯಾರ್ಥಿಗಳು ಡೌನ್ಲೋಡ್ ಮಾಡಬಹುದು ಮತ್ತು ಆಫ್ಲೈನ್ನಲ್ಲಿ ಪ್ರಯತ್ನಿಸಬಹುದು. ಪೂರ್ಣಗೊಂಡ ನಂತರ, ವಿದ್ಯಾರ್ಥಿಗಳು ಪರೀಕ್ಷಾ ವರದಿಯನ್ನು ವೀಕ್ಷಿಸಲು ಆನ್ಲೈನ್ಗೆ ಹಿಂತಿರುಗಿ ತಮ್ಮ ಉತ್ತರಗಳನ್ನು ಸಲ್ಲಿಸಬೇಕಾಗುತ್ತದೆ.
ಸುಗಮ ಅನುಭವವನ್ನು ಖಚಿತಪಡಿಸಿಕೊಳ್ಳಲು, ಮೊದಲ ಏಳು ದಿನಗಳವರೆಗೆ ಬೆಳಿಗ್ಗೆ 10 ರಿಂದ ಮಧ್ಯರಾತ್ರಿಯವರೆಗೆ ಎನ್ಟಿಎ ನೇರ ಬೆಂಬಲವನ್ನು ನೀಡಿದೆ, ಇದರಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳನ್ನು ಪೂರ್ವಭಾವಿಯಾಗಿ ಪರಿಹರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.