ಲಕ್ನೋ: ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಇವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಪರ್ಸನಲ್ ಸೆಕ್ರೆಟರಿ ಆಗಿದ್ದಾರೆ. ಸಾವಿರ ಬಸ್ಸುಗಳ ಪಟ್ಟಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನಕಲಿ ಮತ್ತು ಫೋರ್ಜರಿ ಮಾಡಿದ ಕಾರಣಕ್ಕಾಗಿ ಇವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ವಲಸಿಗ ಕಾರ್ಮಿಕರನ್ನು ಸ್ಥಳಾಂತರ ಮಾಡಲು ಸಾವಿರ ಬಸ್ಸುಗಳನ್ನು ಓಡಿಸಲು ಅವಕಾಶ ಮಾಡಿಕೊಡುವಂತೆ ಪ್ರಿಯಾಂಕ ವಾದ್ರಾ ಅವರು ಉತ್ತರ ಪ್ರದೇಶ ಸರ್ಕಾರಕ್ಕೆ ಕೇಳಿಕೊಂಡಿದ್ದರು. ಅದರಂತೆ ಸರಕಾರವು ಬಸ್ಸುಗಳ ದಾಖಲೆಯನ್ನು ಕಳುಹಿಸಿಕೊಡುವಂತೆ ತಿಳಿಸಿತ್ತು. ಆದರೆ ಕಾಂಗ್ರೆಸ್ ಕಳುಹಿಸಿಕೊಟ್ಟ ಬಸ್ಸುಗಳ ವಿವರಗಳಲ್ಲಿ ಆಟೋಗಳು ಮತ್ತು ದ್ವಿಚಕ್ರ ವಾಹನಗಳು ಕೂಡ ಸೇರಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಉತ್ತರಪ್ರದೇಶ ಪೊಲೀಸರು ವಾಹನಗಳ ದಾಖಲೆಯನ್ನು ಪೋರ್ಜರಿ ಮಾಡಿದ ಕಾರಣಕ್ಕಾಗಿ ಪ್ರಿಯಾಂಕಾ ಅವರ ಪರ್ಸನಲ್ ಸೆಕ್ರೆಟರಿ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಲಕ್ನೋದ ಹಜರತ್ಗಂಝ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಹಿತೆಯ 420, 467 ಮತ್ತು 468 ಸೆಕ್ಷನ್ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ.
ಅಗತ್ಯ ಅನುಮತಿಗಳನ್ನು ಪಡೆಯದೆ ವಲಸಿಗರನ್ನು ಸ್ಥಳಾಂತರ ಮಾಡಲು ನಡೆಸಿದ ಕಾರಣಕ್ಕಾಗಿ ಕೂಡ ಈ ನಾಯಕರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಸರಕಾರಕ್ಕೆ ಕಾಂಗ್ರೆಸ್ ಕಳುಹಿಸಿಕೊಟ್ಟ ಬಸ್ಸುಗಳ ಪಟ್ಟಿಯಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಕೂಡ ಸೇರಿವೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಅಲ್ಲದೆ, ಪಟ್ಟಿಯಲ್ಲಿ ಇರುವ ಅನೇಕ ಬಸ್ಸುಗಳು ಸಮರ್ಪಕವಾದ ಪಿಟ್ನೆಸ್ ಸರ್ಟಿಫಿಕೇಟ್ ಮತ್ತು ಇನ್ಸೂರೆನ್ಸ್ ಪೇಪರ್ ಅನ್ನು ಹೊಂದಿಲ್ಲ ಎಂದಿದೆ.
“ಸಾವಿರ ಬಸ್ಸುಗಳ ಪಟ್ಟಿಯಲ್ಲಿ 79 ಬಸ್ಸುಗಳು ಸಂಚಾರಕ್ಕೆ ಯೋಗ್ಯವಲ್ಲ. 297 ಬಸ್ಸುಗಳ ಫಿಟ್ನೆಸ್ ಮತ್ತು ಇನ್ಸೂರೆನ್ಸ್ ಎಕ್ಸ್ಪೈರಿ ಆಗಿದೆ. ನೂರು ವಾಹನಗಳು ಬಸ್ಸುಗಳೇ ಅಲ್ಲ. 70 ಬಸ್ಸುಗಳಿಗೆ ದಾಖಲೆಗಳಿಲ್ಲ” ಎಂದು ಯುಪಿ ಸರ್ಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.