News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹವಾಮಾನ ವರದಿ: ಭಾರತವನ್ನು ಕೆಣಕಲು ಹೋಗಿ ಟ್ರೋಲ್‌ಗೆ‌ ಒಳಗಾದ ಪಾಕಿಸ್ಥಾನ

ನವದೆಹಲಿ: ಭಾರತದ ಅವಿಭಾಜ್ಯ ಭೂ ಪ್ರದೇಶವಾಗಿರುವ ಲಡಾಖ್‌ನ ಹವಾಮಾನ ವರದಿಯನ್ನು ಬಿತ್ತರಿಸಿ ಆ ಮೂಲಕ ಭಾರತಕ್ಕೆ ತಿರುಗೇಟು ನೀಡಲು ಹೋದ ಪಾಕಿಸ್ಥಾನದ ಈಗ ಸ್ವತಃ ಟ್ರೋಲ್‌ಗೆ ಒಳಗಾಗಿದೆ.

ರೇಡಿಯೋ ಪಾಕಿಸ್ಥಾನ ಲಡಾಖ್ ‌ನ ಹವಾಮಾನ ವರದಿಯನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಇದರಲ್ಲಿ ಗರಿಷ್ಠ ತಾಪಮಾನ -4 ಡಿಗ್ರಿ, ಕನಿಷ್ಠ ತಾಪಮಾನ-1 ಡಿಗ್ರಿ ಎಂದು ಉಲ್ಲೇಖ ಮಾಡಿದೆ. ಕನಿಷ್ಠ ಇರಬೇಕಾ ಜಾಗದಲ್ಲಿ ಗರಿಷ್ಠ ಹಾಕಿ ಎಡವಟ್ಟು ಮಾಡಿಕೊಂಡಿದೆ.

ಟ್ವಿಟರ್ ಬಳಕೆದಾರರು ಈ ತಪ್ಪನ್ನು ಕಂಡುಹಿಡಿದು ಪಾಕಿಸ್ಥಾನವನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಭಾರತಕ್ಕೆ ತಿರುಗೇಟು ನೀಡಲು ಹೋಗಿ ಇದೀಗ ಸ್ವತಃ ಪಾಕಿಸ್ಥಾನ ಮುಖಭಂಗಕ್ಕೀಡಾಗಿದೆ.

ಕೆಲದಿನಗಳ ಹಿಂದೆಯಷ್ಟೇ ಭಾರತದ ಹವಾಮಾನ ಇಲಾಖೆಯು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಹವಾಮಾನ ವರದಿಯನ್ನು ನೀಡಲು ಆರಂಭಿಸಿದೆ. ಇದು ಪಾಕಿಸ್ಥಾನವನ್ನು ಕಂಗೆಡಿಸಿದೆ. ಹೀಗಾಗಿ ಅದು ತನ್ನ ಹವಾಮಾನ ವರದಿಯಲ್ಲಿ ಭಾರತದ ಮತ್ತು ಜಮ್ಮು-ಕಾಶ್ಮೀರದ ಹವಾಮಾನ ವರದಿಯನ್ನು ನೀಡಲು ಪ್ರಾರಂಭಿಸಿದೆ. ಆದರೆ ಮೊದಲ ಪ್ರಯತ್ನದಲ್ಲೇ ಅದು ತಪ್ಪು ತಪ್ಪಾದ ವರದಿಯನ್ನು ನೀಡಿ ಜನರಿಂದ ಛೀಮಾರಿ ಹಾಕಿಸಿಕೊಂಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top