ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರುವ ಪ್ರತಿಯೊಂದು ಯೋಜನೆ, ಕಾರ್ಯಕ್ರಮ, ನಿರ್ದೇಶನಗಳು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅನುಕೂಲವಾಗುವಂತೆಯೇ ರೂಪಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಸದ್ಯ ಕೊರೋನಾ ಸೋಂಕಿನಿಂದ ದೇಶಕ್ಕೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಿದೆ. ಇದರಿಂದ ರಾಷ್ಟ್ರವನ್ನು ಮತ್ತೆ ಸಬಲವಾಗಿ ನಿರ್ಮಿಸುವ ಸಲುವಾಗಿ 20 ಲಕ್ಷ ಕೋಟಿ ರೂ. ಗಳ ಪ್ಯಾಕೇಜ್ ಒಂದನ್ನು ಪ್ರಧಾನಿ ನೀಡಿದ್ದಾರೆ. ಈ ಪ್ಯಾಕೇಜ್ ದೇಶದ ರೈತರು, ಬಡವರು, ಮದ್ಯಮ ವರ್ಗ ಮತ್ತು ವ್ಯಾಪಾರ ವರ್ಗಗಳ ಜನರಿಗೆ ಅನುಕೂಲಗಳನ್ನು ಒದಗಿಸಿ ಕೊಡಲಿರುವುದಾಗಿಯೂ ಶಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಸದೃಢ ಹಾಗೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವುದಕ್ಕೂ ಪೂರಕವಾಗಲಿದೆ ಎಂದು ಅವರೂ ತಿಳಿಸಿದ್ದಾರೆ.
ಈ 21 ನೇ ಶತಮಾನ ವಿಶ್ವಕ್ಕೆ ಭಾರತದ ಶಕ್ತಿಯನ್ನು ತೋರಿಸುವ ಸಲುವಾಗಿ ಬಳಕೆಯಾಗಬೇಕು. ಹೀಗಾಗಬೇಕಾದರೆ ಇದಕ್ಕೆ ದೇಶದ ಪ್ರತಿಯೊಬ್ಬನೂ ಕೈಜೋಡಿಸಬೇಕು. ದೇಶದಲ್ಲಿರುವ 130 ಕೋಟಿಗೂ ಅಧಿಕ ಜನರು ಸ್ವಾವಲಂಬಿ ತತ್ವದಡಿ ಕೆಲಸ ಮಾಡಿದಲ್ಲಿ ವಿಶ್ವಕ್ಕೆ ಭಾರತವನ್ನು ಮಾದರಿಯನ್ನಾಗಿಸುವುದು ಕಷ್ಟದ ಕೆಲಸವಲ್ಲ ಎಂದು ಶಾ ಹೇಳಿದ್ದಾರೆ.
ಜೊತೆಗೆ ರಾಷ್ಟ್ರದ ಆರ್ಥಿಕತೆಯ ಸುಧಾರಣೆಗಾಗಿ ಸ್ವದೇಶಿ ವಸ್ತುಗಳ ಬಳಕೆಗೆ ಪ್ರೋತ್ಸಾಹ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ. ಇಂತಹ ಕ್ರಮಗಳ ಮೂಲಕವೇ ಭಾರತ ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಸ್ಫೂರ್ತಿ ಆಗುತ್ತದೆ ಎಂದಿದ್ದಾರೆ. ಜೊತೆಗೆ ಕೋವಿಡ್ -19 ವಿರುದ್ಧ ಭಾರತ ನಡೆಸುತ್ತಿರುವ ಹೋರಾಟವನ್ನು ಇತರ ದೇಶಗಳೂ ಶ್ಲಾಘಿಸುತ್ತಿವೆ. ಈ ಪರಿಸ್ಥಿತಿಯನ್ನು ರಾಷ್ಟ್ರ ಸವಾಲಾಗಿ ತೆಗೆದುಕೊಂಡಿದ್ದು, ಇತರ ದೇಶಗಳಿಗೂ ಕೊರೋನಾ ವಿರುದ್ಧ ಹೋರಾಟಕ್ಕೆ ಸಹಾಯ ಮಾಡುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
मैं देश की जनता से भी अपील करता हूं कि आप देश में बने उत्पादों को अधिक से अधिक उपयोग में लायें व अन्य लोगों को भी इसके प्रति प्रोत्साहित करें। हर भारतीय अगर भारत में बने उत्पादों (स्वदेशी) का उपयोग करने का संकल्प ले तो पांच वर्षों में देश का लोकतंत्र आत्मनिर्भर बन सकता है।
— Amit Shah (@AmitShah) May 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.