ನವದೆಹಲಿ: ಇಂದು ಅಂತಾರಾಷ್ಟ್ರೀಯ ನರ್ಸ್ಗಳ ದಿನ. ತಮ್ಮ ಬದುಕನ್ನೇ ರೋಗಿಗಳ ಆರೈಕೆಗಾಗಿ ಮುಡುಪಾಗಿಡುವ ದಾದಿಯರನ್ನು ಸ್ಮರಿಸಿ ಗೌರವಿಸಬೇಕಾದ ದಿನ. ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ದಾದಿಯರ ಕೊಡುಗೆ ಅಸಾಧಾರಣವಾದುದು.
ಅಂತಾರಾಷ್ಟ್ರೀಯ ನರ್ಸ್ಗಳ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಅನನ್ಯ ಪಾತ್ರವನ್ನು ವಹಿಸುತ್ತಿರುವ ದಾದಿಯರ ಕಾರ್ಯವನ್ನು ಕೊಂಡಾಡಿದ್ದಾರೆ. “ನಮ್ಮ ಭೂಮಿಯನ್ನು ಆರೋಗ್ಯವಾಗಿಡಲು 24 ಗಂಟೆಯೂ ಅವಿರತವಾಗಿ ಶ್ರಮಿಸುವ ದಾದಿಯರಿಗೆ ಕೃತಜ್ಞತೆ ಅರ್ಪಿಸಲು ವಿಶ್ವ ನರ್ಸ್ಗಳ ದಿನ ಒಂದು ವಿಶೇಷ ಸಂದರ್ಭವಾಗಿದೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Inspired by Florence Nightingale, our hardworking nursing staff personify abundant compassion. Today, we also reiterate our commitment to keep working for welfare of nurses and devote greater attention to opportunities in this field so that there is no shortage of caregivers.
— Narendra Modi (@narendramodi) May 12, 2020
“ನರ್ಸ್ಗಳು ಮತ್ತು ಅವರ ಕುಟುಂಬಕ್ಕೆ ನಾವು ಸದಾ ಆಭಾರಿಯಾಗಿದ್ದೇವೆ” ಎಂದಿದ್ದಾರೆ.
ಫ್ಲೋರೆನ್ಸ್ ನೈಟಿಂಗೇಲ್ ಅವರ ಆದರ್ಶದೊಂದಿಗೆ ದಾದಿಯರು ಅಸಾಮಾನ್ಯವಾದ ಸಹಾನುಭೂತಿಯನ್ನು ಪ್ರದರ್ಶಿಸುತ್ತಾರೆ ಎಂದಿದ್ದಾರೆ.
“ದಾದಿಯರ ಕಲ್ಯಾಣಕ್ಕಾಗಿ, ಕಾಳಜಿ ವಹಿಸುವವರಿಗೆ ಯಾವುದೇ ಕುಂದು ಕೊರತೆ ಉಂಟಾಗದಂತೆ ಕ್ರಮ ವಹಿಸುವ ನಮ್ಮ ಬದ್ಧತೆಯನ್ನು ನಾವು ಇಂದು ಪುನರುಚ್ಚರಿಸುತ್ತೇವೆ” ಎಂದಿದ್ದಾರೆ.
ನರ್ಸಿಂಗ್ ಸ್ಥಾಪಕಿ ಎಂದು ಕರೆಯಲ್ಪಡುವ, ಸೇವೆಗೆ ಮತ್ತೊಂದು ಹೆಸರಾಗಿರುವ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವನ್ನು ಅಂತರಾಷ್ಟ್ರೀಯ ನರ್ಸ್ಗಳ ದಿನವಾಗಿ ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.